ಕೊಲ್ಕತ್ತಾ: ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ವೈದ್ಯರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಹೊಟ್ಟೆಯಿಂದ 600 ಕ್ಕೂ ಹೆಚ್ಚು ಕಬ್ಬಿಣದ ಮೊಳೆಗಳನ್ನ ಹೊರತೆಗೆದಿರೋ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ.
ರಾಜ್ಯದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಈ ಶಸ್ತ್ರಚಿಕ್ತೆಯನ್ನು ಮಾಡಿ ಯಶಸ್ವಿಯಾಗಿದ್ದು, ಈಗ ರೋಗಿಗೆ ಯಾವುದೇ ತೊಂದರೆ ಇಲ್ಲ, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ರೋಗಿಯ ಕುಟುಂಬಸ್ಥರು ಕಳೆದ ತಿಂಗಳು ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರೋಗಿಗೆ ಯುಎಸ್‍ಜಿ ಟೆಸ್ಟ್ ಮಾಡಿಸಿದ ನಂತರ ರೋಗಿಯ ಹೊಟ್ಟೆಯಲ್ಲಿ ಬಹಳಷ್ಟು ಮೊಳೆಗಳು ಇರುವುದು ಕಂಡುಬಂದಿತ್ತು.
Advertisement
Advertisement
ರೋಗಿ ಒಬ್ಬ ಮಾನಸಿಕ ಅಸ್ವಸ್ಥರಾಗಿದ್ದು, ಅನ್ಯ ವಸ್ತುಗಳನ್ನು ನುಂಗುವ ಅಭ್ಯಾಸವನ್ನು ಹೊಂದಿದ್ದರು. ಆದರೆ ಅವರ ಹೊಟ್ಟೆಯಲ್ಲಿ ಬಹಳಷ್ಟು ಮೊಳೆಗಳು ಇರಬಹುದು ಎಂದು ಕಲ್ಪನೆಯನ್ನು ಸಹ ಮಾಡಿರಲಿಲ್ಲ ಎಂದು ರೋಗಿಯ ಸಂಬಂಧಿ ತಿಳಿಸಿದ್ದಾರೆ.
Advertisement
ಈ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಅಪಾಯಕಾರಿಯಾಗಿತ್ತು. ಆದರೂ ನಾವು ರಿಸ್ಕ್ ತೆಗೆದುಕೊಂಡು ಯಶಸ್ವಿಯಾಗಿ ಆಪರೇಷನ್ ಮಾಡಿದ್ದೇವೆ. ಈಗ ರೋಗಿ ಆರೋಗ್ಯವಾಗಿದ್ದಾರೆ. ಆದರೆ ಅಚ್ಚರಿ ಎಂದರೆ ತುಂಬಾ ದಿನಗಳ ಕಾಲ ಮೊಳೆಗಳು ಹೊಟ್ಟೆಯಲ್ಲಿದ್ದರೂ ಇದರಿಂದ ರೋಗಿಗೆ ಒಂದು ಸಣ್ಣ ಗಾಯವೂ ಆಗಿಲ್ಲ. ಜೊತೆಗೆ ಮೊಳೆಗಳು ಚುಚ್ಚಿಕೊಂಡಿಲ್ಲ ಎಂದು ವೈದ್ಯಕೀಯ ತಂಡದ ನೇತೃತ್ವ ವಹಿಸಿದ ಶಸ್ತ್ರಚಿಕಿತ್ಸಕ ಸಿದ್ಧಾರ್ಥ ಬಿಸ್ವಾಸ್ ಅವರು ಹೇಳಿದ್ದಾರೆ.
ರೋಗಿಯ ಹೊಟ್ಟೆ ಸಾಮಾನ್ಯಕ್ಕಿಂತ ದೊಡ್ಡದಾಗಿತ್ತು. ಅದರ ತುಂಬಾ ಬರಿ ಮೊಳೆಗಳೇ ತುಂಬಿದ್ದವು. ನಾವು ಆಪರೇಷನ್ ಮಾಡುವಾಗ ಅವರ ಹೊಟ್ಟೆಯ ಒಂದು ಭಾಗದಲ್ಲಿ ಕುಯ್ದು ಒಂದು ಮ್ಯಾಗ್ನೆಟ್ ಬಳಸಿಕೊಂಡು ಒಂದೊಂದೇ ಮೊಳೆಗಳನ್ನು ಹೊರತೆಗೆದೆವು. ಒಟ್ಟಾರೆ 600 ಮೊಳೆಗಳಿದ್ದವು. ರೋಗಿ ನುಂಗಿದ್ದ ಎಲ್ಲಾ ಮೊಳೆಗಳನ್ನು ಹೊರತೆಗೆದಿದ್ದೇವೆ ಎಂದು ಡಾ.ಸಿದ್ಧಾರ್ಥ ಅವರು ಖಚಿತಪಡಿಸಿದ್ದಾರೆ.