ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್‌

Public TV
3 Min Read
vote

ಬೆಂಗಳೂರು: (Bengaluru) ಚಿಲುಮೆ ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಬಿಬಿಎಂಪಿಯ (BBMP) ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಅನುಮಾನ ವ್ಯಕ್ತವಾಗಿದೆ. ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್‌ ಆಗಿದೆ.

243 ವಾರ್ಡ್‌ಗಳ ಚುನಾವಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿತ್ತು. ಈಗಾಗಲೇ ಚಿಲುಮೆ ಸಂಸ್ಥೆಯ ಸಿಬ್ಬಂದಿ ಬಿಎಲ್‌ಒಗಳು ಎಂದು ಐಡಿ ಕಾರ್ಡ್ ತಯಾರಿಸಿ ಮನೆ ಮನೆಗೂ ಹೋಗಿ ಮಾಹಿತಿ ಕಲೆ ಹಾಕಿದ್ದಾರೆ. ಬಿಎಲ್‌ಒಗಳು ನೀಡಿರುವ ಮಾಹಿತಿ ಆಧಾರದ ಮೇಲೆ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದೆ. ಅದರಲ್ಲಿ ಒಟ್ಟು 6,69,652 ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್‌ ಆಗಿದೆ. ಡಿಲೀಟ್‌ ಆದವರಲ್ಲಿ ಬದುಕಿರುವವರ ಹೆಸರು ಸಹ ಇದೆ ಎನ್ನಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಹಿಂದೆ ಚಿಲುಮೆ ಸಂಸ್ಥೆಯ ಕೈವಾಡ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜನರ ಸರ್ವೇ ಮಾಡಿಸಿ ಚುನಾವಣೆಗೆ ಬಳಸಿಕೊಂಡಿದೆ: ಬೊಮ್ಮಾಯಿ

BBMP

ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಾರು ಮಂದಿ ಹೆಸರು ಡಿಲೀಟ್‌ ಆಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968 ಮತದಾರರು, ಕೆ.ಆರ್.ಪುರಂ ಕ್ಷೇತ್ರದಿಂದ 39,763 ಮತದಾರರು, ಬ್ಯಾಟರಾಯನಪುರ ಕ್ಷೇತ್ರದಿಂದ 30,757 ಮತದಾರರ ಹೆಸರು ಡಿಲೀಟ್‌ ಆಗಿದೆ.

ಯಶವಂತಪುರ 35,829, ಆರ್.ಆರ್. ನಗರ 33,009, ದಾಸರಹಳ್ಳಿ 35,086, ಮಹಾಲಕ್ಷ್ಮೀ ಲೇಔಟ್ 20,404, ಮಲ್ಲೇಶ್ವರಂ 11,788, ಹೆಬ್ಬಾಳ್ 20,039, ಪುಲಕೇಶಿ ನಗರ 22,196, ಸರ್ವಜ್ಞ ನಗರ 28,691, ಸಿವಿ ರಾಮನ್ ನಗರ 21,457, ಶಿವಾಜಿನಗರ 14,679, ಶಾಂತಿನಗರ 20,386, ಗಾಂಧಿನಗರ 16,465, ರಾಜಾಜಿನಗರ 12,757, ಗೋವಿಂದರಾಜ್ ನಗರ 20,067, ವಿಜಯನಗರ 28,562, ಚಾಮರಾಜಪೇಟೆ 19,304, ಚಿಕ್ಕಪೇಟೆ 16,231, ಬಸವನಗುಡಿ 18,838, ಪದ್ಮನಾಭ ನಗರ 17,435, ಬಿಟಿಎಂ ಲೇಔಟ್ 16,141, ಜಯನಗರ 13,061, ಮಹಾದೇವಪುರ 33,376, ಬೊಮ್ಮನಹಳ್ಳಿ 31,157, ಬೆಂಗಳೂರು ಸೌತ್ 45,927, ಆನೇಕಲ್ 24,279 ಮತದಾರರ ಹೆಸರನ್ನು ಡಿಲೀಟ್‌ ಮಾಡಲಾಗಿದೆ. ಇದನ್ನೂ ಓದಿ: ಮತ ಕನ್ನ ಆರೋಪ- ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ

AADHAAR CARD AND VOTER ID

ಚಿಲುಮೆ ಸಂಸ್ಥೆ ವಿಚಾರವಾಗಿ ಮಾತನಾಡಿರುವ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ, ಬಿಬಿಎಂಪಿ ಮಹದೇವಪುರ ಕ್ಷೇತ್ರದಲ್ಲಿ ಮಾತ್ರ ಐಡಿ ಕಾರ್ಡ್ ದುರುಪಯೋಗ ಆಗಿದೆ. ಉಳಿದ ಯಾವುದೇ ಕ್ಷೇತ್ರದಲ್ಲಿ ದುರುಪಯೋಗ ಕಂಡು ಬಂದಿಲ್ಲ. ಚಿಲುಮೆ ಸಂಸ್ಥೆ ನೀಡಿರುವ ಮಾಹಿತಿ ಆಧರಿಸಿ ಆಡಿಷನ್, ಡಿಲಿಷನ್ ಪ್ರಕ್ರಿಯೆ ಮಾಡಿಲ್ಲ. ಮತದಾರರ ಪಟ್ಟಿ ವಿಚಾರದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ನಿನ್ನೆ ಆರ್‌ಒಗಳಿಂದ ಲಿಖಿತ ಮಾಹಿತಿ ಪಡೆದಿರುವುದು ನಿಜ. ಬಿಬಿಎಂಪಿ ಮುಖ್ಯ ಆಯುಕ್ತರಿಂದ ಚುನಾವಣಾ ಆಯೋಗಕ್ಕೆ ವರದಿ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

6 ಲಕ್ಷ ಮತದಾರರ ಹೆಸರು ಕೈಬಿಟ್ಟಿರುವುದು ಚಿಲುಮೆ ಸಂಸ್ಥೆ ನಡೆಸಿದ ಮಾಹಿತಿಯಿಂದಲ್ಲ. 6 ಲಕ್ಷ ಮತದಾರರ ಹೆಸರು ಡ್ಯೂಪ್ಲಿಕೇಟ್‌ ಆಗಿತ್ತು. ಒಬ್ಬರೇ ವ್ಯಕ್ತಿಯ ಫೋಟೊ, ವಿಳಾಸ ಎರಡು ಕ್ಷೇತ್ರದಲ್ಲಿ ಇತ್ತು. ಈ ರೀತಿಯ ಕೇಸ್‌ಗಳ ಹೆಸರನ್ನು ಮಾತ್ರ ಡಿಲೀಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮತ ಮಾಹಿತಿಗೆ ಕನ್ನ: ಕಾಂಗ್ರೆಸ್ ಹೊಸ ಬಾಂಬ್

ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವ ಕುರಿತು ಸಾರ್ವಜನಿಕರು ಮಾತನಾಡಿದ್ದಾರೆ. ಆರು ತಿಂಗಳ ಹಿಂದೆ ವೋಟರ್ ಐಡಿಯಲ್ಲಿ ನನ್ ಹೆಸರು ಇತ್ತು. ಈಗ ಹೆಸರು ಕೈ ಬಿಡಲಾಗಿದೆ. ನಮ್ಮ ಕುಟುಂಬದ 4 ಜನರ ಹೆಸರನ್ನು ಕೈಬಿಡಲಾಗಿದೆ. ನಮ್ಮ ಸುತ್ತಮುತ್ತಲಿನ ಮನೆಯ ಹಲವರ ಹೆಸರು ಕೈಬಿಡಲಾಗಿದೆ. ಬಿಎಲ್‌ಓ ಅಂತ ಕೆಲವರು ಹೇಳಿ ಬಂದಿದ್ದರು. ಆಗ ಮಾಹಿತಿ ಕೊಟ್ಟಿದ್ದರೂ, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಡಿದ್ದಾರೆ ಎಂದು ಕುಟುಂಬವೊಂದು ದೂರಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *