– ಮರಳಿ ಕರೆಸಿಕೊಳ್ಳುವಂತೆ ಮನವಿ
ಧಾರವಾಡ: ರಾಜ್ಯದ 500ಕ್ಕೂ ಹೆಚ್ಚು ಮಂದಿ ನೈಜಿರಿಯಾದಲ್ಲಿ ಲಾಕ್ ಆಗಿದ್ದು, ಇದೀಗ ಮರಳಿ ಕರೆಸಿಕೊಳ್ಳುವಂತೆ ಕನ್ನಡಿಗರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನೈಜಿರಿಯಾದಲ್ಲಿ ದಿನೇ ದಿನೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗರು ಭಯಭೀತರಾಗಿದ್ದು, ನೈಜಿರಿಯಾ ಕನ್ನಡ ಸಂಘ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ರಾಯಭಾರಿ ಕಚೇರಿಗೆ ನಿರಂತರ ಒತ್ತಡ ಹಾಕುತ್ತಿದೆ.
Advertisement
Advertisement
ಧಾರವಾಡ ಸೇರಿದಂತೆ ರಾಜ್ಯದ 500ಕ್ಕೂ ಹೆಚ್ಚು ಮಂದಿ ನೈಜಿರಿಯಾದಲ್ಲಿ ಲಾಕ್ ಆಗಿದ್ದು, ಆದಷ್ಟು ಬೇಗ ಇಂಡಿಯಾಗೆ ಕರೆಸಿಕೊಂಡು ಬಿಡಿ ಎಂದು ಕನ್ನಡ ಸಂಘದವರು ಅಳಲು ತೋಡಿಕೊಳ್ಳುತ್ತಿದ್ದಾರೆ.
Advertisement
ಈ ಬಗ್ಗೆ ಸಂಘದ ಕಾರ್ಯದರ್ಶಿ ರಾಮ್ ವಿಡಿಯೋ ಮಾಡಿ, ನೈಜಿರಿಯಾದಲ್ಲಿ ಕರ್ನಾಟಕದ 500ರಿಂದ 600 ಮಂದಿ ಇದ್ದೇವೆ. ಈ ದೇಶದಲ್ಲಿ ಕೋವಿಡ್ 19 ವೇಗವಾಗಿ ಹರಡುತ್ತಿದೆ. ಲೆಗೋಸ್ ಎಂಬ ಸಣ್ಣ ರಾಜ್ಯದಲ್ಲಿ ನಾವೆಲ್ಲ ಸಂಕಷ್ಟದಲ್ಲಿದ್ದೇವೆ. ಲೆಗೋಸ್ ರಾಜ್ಯದಲ್ಲಿ 997 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾದಿಂದ ಈಗಾಗಲೇ 40 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಪ್ರಧಾನಿ ಮತ್ತು ಮುಖ್ಯಮಂತ್ರಿ ನಮ್ಮನ್ನು ಕರೆಯಿಸಿಕೊಳ್ಳಬೇಕು ಎಂದು ಆಗ್ರಹ ಮತ್ತು ಮನವಿ ಮಾಡಿಕೊಂಡಿದ್ದಾರೆ.