ರಾಯಚೂರು: ರಾಯಚೂರು ನಗರಸಭೆ ಅವ್ಯವಸ್ಥೆ ಬಳಿಕ ಈಗ ಮಾನ್ವಿ ತಾಲೂಕಿನಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
Advertisement
ಮಾನ್ವಿ ತಾಲೂಕಿನ ವಲ್ಕಂದಿನ್ನಿ ಹಾಗೂ ಜುಕೂರು ಗ್ರಾಮದಲ್ಲಿ ಜನ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ ಶಾಲೆಯ ಹತ್ತಕ್ಕೂ ಹೆಚ್ಚು ಮಕ್ಕಳು ಹಾಗೂ ಗ್ರಾಮಸ್ಥರು ನಿರ್ಜಲೀಕರಣದಿಂದ ರಾಯಚೂರಿನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಕ್ಕೆ ನೇರವಾಗಿ ಸರಬರಾಜಾಗುವ ತುಂಗಭದ್ರಾ ನದಿಯ ನೀರು ಕುಡಿದು ವಾಂತಿಬೇಧಿಯಾಗಿದೆ. ಆರೋಗ್ಯ ಇಲಾಖೆ ಈಗಾಗಲೇ ಎರಡು ಗ್ರಾಮಗಳಲ್ಲೂ ಮೆಡಿಕಲ್ ಕ್ಯಾಂಪ್ ತೆರೆದಿದ್ದು ಸ್ಥಳೀಯವಾಗಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು 7ನೇ ಸಾವು – ಅಂಕಿ ಅಂಶದಲ್ಲಿ ಅಧಿಕಾರಿಗಳ ಕಳ್ಳಾಟ
Advertisement
Advertisement
ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್ ನಿರ್ಲಕ್ಷ್ಯದಿಂದ ಗ್ರಾಮಕ್ಕೆ ನೀರಿನ ತೊಂದರೆಯಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 500 ಮನೆಗಳಿರುವ ವಲ್ಕಂದಿನ್ನಿ ಗ್ರಾಮದಲ್ಲಿ ಒಂದೇ ಆರ್‌ಓ ಪ್ಲಾಂಟ್ ಇದ್ದು ಶುದ್ದ ನೀರು ಸಿಗದ ಗ್ರಾಮಸ್ಥರು ನದಿ ನೀರನ್ನೇ ನೇರವಾಗಿ ಕುಡಿಯುತ್ತಿದ್ದಾರೆ. ಹಳ್ಳ, ಚರಂಡಿ ನೀರು ಸೇರಿ ನದಿ ನೀರು ಕಲುಷಿತವಾಗಿರುವುದರಿಂದ ಅದನ್ನು ಕುಡಿದ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ ಎಂಬ ಸಂಶಯವಿದೆ. ಇದನ್ನೂ ಓದಿ: ಸ್ವಂತ ಮಗಳ ಕೆನ್ನೆ, ಎದೆಯ ಭಾಗಕ್ಕೆ ಕಚ್ಚಿದ ತಂದೆ
Advertisement
ಕೆಲದಿನಗಳ ಹಿಂದೆ ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು 7ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 200ಕ್ಕೂ ಹೆಚ್ಚು ಜನ ಆಸ್ಪತ್ರೆಗಳಲ್ಲಿ, ಮನೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.