ರಾಮನಗರ: ಅವಧಿ ಮುಗಿದ ಐಸ್ ಕ್ರೀಂ (Ice Cream) ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಚನ್ನಪಟ್ಟಣ (Channapatna) ಟಿಪ್ಪುನಗರದ ಮಿಲನ್ ಶಾದಿಮಹಲ್‌ನಲ್ಲಿ ನಡೆದಿದೆ.
ಮಿಲನ್ ಶಾದಿಮಹಲ್‌ನಲ್ಲಿ ಭಾನುವಾರ ನಡೆದ ಮದುವೆ ಸಮಾರಂಭವೊಂದರಲ್ಲಿ 80ಕ್ಕೂ ಹೆಚ್ಚು ಮಂದಿ ಐಸ್ ಕ್ರೀಂ ಸೇವಿಸಿದ್ದರು. ಈ ಪೈಕಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ. ಸಂತ್ರರನ್ನು ಚಿಕಿತ್ಸೆಗಾಗಿ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಂತ್ರಸ್ತೆಯರಿಗಾಗಿ ಸಹಾಯವಾಣಿ ತೆರೆದ ಎಸ್‌ಐಟಿ
ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಘಟನೆಯಿಂದ ಸ್ಥಳೀಯರು ಗಾಬರಿಗೊಂಡಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಯುವತಿಯ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಹರಿಬಿಟ್ಟ ನಾಲ್ವರು ಅಪ್ರಾಪ್ತರು