ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಕಾಮಗಾರಿ ಶೇ.40ಕ್ಕೂ ಹೆಚ್ಚು ಪೂರ್ಣಗೊಂಡಿದ್ದು, 2023ರಿಂದ ದೇವರ ದರ್ಶನ ಪಡೆಯಬಹುದು ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದರು.
ಈ ಬಗ್ಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ದೇವಾಲಯದ ಸುತ್ತಲಿನ ರಸ್ತೆಗಳ ಸುಧಾರಣೆಯ ಕಾರ್ಯ ಹಾಗೂ ನಿರ್ಮಾಣದ ಹಂತ ಚಟುವಟಿಕೆಗಳು ಭರದಿಂದ ಸಾಗಿವೆ. ಪ್ರಪಂಚದಾದ್ಯಂತ ಇರುವ ರಾಮಭಕ್ತರು 2023ರಿಂದ ದೇವರಿಗೆ ನಮನ ಸಲ್ಲಿಸಬಹುದು ಎಂದರು.
ದೇವಾಲಯವು ಕನಿಷ್ಠ ಒಂದು ಸಾವಿರ ವರ್ಷಗಳ ಕಾಲ ಸ್ಥಿರತೆಯಲ್ಲಿರಲು ಬೃಹತ್ ಅಡಿಪಾಯವನ್ನು ಹಾಕಲಾಗುತ್ತಿದೆ. ದೇವಸ್ಥಾನದ ವಿಸ್ತೀರ್ಣ, ಪ್ರಾಂಗಣ ಸೇರಿದಂತೆ ಒಟ್ಟು 8 ಎಕರೆ ಜಾಗಗಳಿಗೆ ತೆರಳಲು ಆಯತಾಕಾರದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ನಡೆದಾಡುವ ರಾಜದೇವರು: ಸಿದ್ದರಾಮೇಶ್ವರ ಸ್ವಾಮೀಜಿ
ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ತರಿಸಿರುವ ಬಿಳಿ ಅಮೃತಶಿಲೆಯನ್ನು ಬಳಸಲಾಗುವುದು. ಅಮೃತಶಿಲೆಯ ಕೆತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಕೆತ್ತಿದ ಕೆಲವು ಮಾರ್ಬಲ್ ಬ್ಲಾಕ್‍ಗಳನ್ನು ಈಗಾಗಲೇ ಅಯೋಧ್ಯೆಗೆ ತರಲಾಗಿದೆ ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಸ್ಥಾಪಿಸಲು ಶಿಲಾನ್ಯಾಸ ನೆರವೇರಿಸಿದ್ದರು. 2020ರ ಆಗಸ್ಟ್ 5ರಂದು ಮಂದಿರದ ನಿರ್ಮಾಣಕ್ಕೆ ಮೋದಿ ಭೂಮಿಪೂಜೆ ಮಾಡಿದ್ದರು. ಇದನ್ನೂ ಓದಿ: ಅಕ್ಟೋಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ