ಬೆಂಗಳೂರು: ಶನಿವಾರ ರಾತ್ರಿ ನಡೆಯಲಿರುವ ಬಾಲಿವುಡ್ ಮೋಹಕ ಬೆಡಗಿ ಸನ್ನಿ ಲಿಯೋನ್ ಅವರ ನೈಟ್ಸ್ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆಯನ್ನು ಆಯೋಜನೆ ಮಾಡಿದ್ದಾರೆ.
ಈಶಾನ್ಯ ವಿಭಾಗ ಡಿಸಿಪಿ ಕಲಾ ಕೃಷ್ಣ ಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಭದ್ರತೆಯನ್ನು ನಿಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ 330 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಕ ನೇಮಕ ಮಾಡಲಾಗಿದೆ. 2 ಎಸಿಪಿ, 6 ಇನ್ಸ್ ಪೆಕ್ಟರ್ ಮತ್ತು 15 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 330 ಪೊಲೀಸರು ಭದ್ರತೆಗೆ ನೇಮಕಗೊಂಡಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕೆಎಸ್‍ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು, ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಆದ್ದರಿಂದ ಇಂದು ಟೆಕ್ ಪಾರ್ಕ್ ಒಳಗೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Advertisement
ಇಂದು ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಟೈಂ ಕ್ರಿಯೇಷನ್ಸ್ ನಿಂದ ಆಯೋಜನೆಗೊಂಡಿದ್ದು, ಫೂಷನ್ ನೈಟ್ ಅನ್ನೋ ಹೆಸರಿನಲ್ಲಿ ನಡೆಯಲಿದೆ. ಸನ್ನಿ ಲಿಯೋನ್ ಆಗಮನವನ್ನು ಕನ್ನಡ ಪರ ಸಂಘಟನೆಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರಿಂದ ಬಿಗಿ ಭದ್ರತೆ ಮಾಡಿದ್ದಾರೆ.
Advertisement
ಈ ಹಿಂದೆ ಸನ್ನಿ ಕಾರ್ಯಕ್ರಮವನ್ನು ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಟೌನ್‍ಹಾಲ್‍ನಲ್ಲಿ ಕೈ ಕುಯ್ದುಕೊಂಡಿದ್ದರು. ಆದರೆ ಅಂದು ಕೈ ಕುಯ್ದುಕೊಂಡಿದ್ದವರೇ ನೂಕು ನುಗ್ಗಲಲ್ಲಿ ನಿಂತು ಬರೋಬ್ಬರಿ 235 ಕಾರ್ಯಕ್ರಮದ ಟಿಕೆಟ್ ಖರೀದಿಸಿದ್ದರು. ಅಷ್ಟೇ ಅಲ್ಲದೇ ಶೇಷಮ್ಮ ಕನ್ನಡ ಹಾಡಿಗೆ ಕುಣಿದರೆ ನೋಡುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆಮೇಲೆ ರಘುದೀಕ್ಷಿತ್ ಕನ್ನಡ ಹಾಡು ಹಾಡುತ್ತಾರೆ. ಅದನ್ನೆಲ್ಲ ನೋಡೋಕೆ ಹೋಗುತ್ತೀವಿ ಅಂತ ಹೇಳಿಕೆಯನ್ನು ಕೊಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv