ಕಲಬುರಗಿ: ಕಲುಷಿತ ನೀರು (Contaminated Water) ಸೇವಿಸಿ 30ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ (Nimbarga) ಗ್ರಾಮದಲ್ಲಿ ನಡೆದಿದೆ.
ನಿಂಬರ್ಗಾ ಗ್ರಾಮದ ಬೋವಿ ಬಡಾವಣೆಯಲ್ಲಿ ಓವರ್ ಹೆಡ್ ಟ್ಯಾಂಕ್‌ನಿಂದ ಸರಬರಾಜು ಆಗಿರುವ ನೀರು ಕುಡಿದು ಬೋವಿ ಬಡಾವಣೆಯ ಜನರು ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಜಾಮೀನು ಸಿಕ್ಕಿ 5 ದಿನವಾದ್ರೂ ಬಿಡುಗಡೆಯಾಗದ ಕಾರ್ತಿಕ್- ಯಾರಾದರೂ ಸಹಾಯಮಾಡಿ ಎಂದು ತಂದೆ ಕಣ್ಣೀರು
ಕಳೆದ ಹಲವು ತಿಂಗಳಿನಿಂದ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸದೆ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಹಿನ್ನೆಲೆ ಜನ ನೀರನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ನಿಂಬರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವಾಯುಪಡೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಏರ್ ಮಾರ್ಷಲ್ ಎಪಿ ಸಿಂಗ್