ಕೋಲಾರ: ಮೂವತ್ತಕ್ಕೂ ಹೆಚ್ಚು ಕೋತಿಗಳನ್ನು ದುಷ್ಕರ್ಮಿಗಳು ಕೊಂದು ಬೆಟ್ಟದಲ್ಲಿ ತಂದು ಬಿಸಾಡಿರುವ ದಾರುಣ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಬಳಿಯ ಯರ್ರಕೊಂಡ ಬೆಟ್ಟದಲ್ಲಿ ನಡೆದಿದೆ.
ಬುಧವಾರ ರಾತ್ರಿ ಯಾರೋ ದುಷ್ಕರ್ಮಿಗಳು ಕೋತಿಗಳನ್ನು ಕೊಂದು, ಮೂಟೆಗಳಲ್ಲಿ ತುಂಬಿಕೊಂಡು ಬಂದು ಬಿಸಾಡಿ ಹೋಗಿದ್ದಾರೆ. ಇಂದು ಬೆಳಿಗ್ಗೆ ಸ್ಥಳೀಯರು ಬೆಟ್ಟದ ಕಡೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
Advertisement
Advertisement
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಹಾಗೂ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ಕೋತಿಗಳ ಸಾಮೂಹಿಕ ಅಂತ್ಯಸಂಸ್ಕಾರ ಕಾರ್ಯವನ್ನು ಮಾಡಿದ್ದಾರೆ.