ಮಂಡ್ಯ: CWMA ಆದೇಶದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ತಮಿಳುನಾಡಿಗೆ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ (KRS And Kabini Reservoir) ನೀರು ಹರಿಸಲಾಗುತ್ತಿದೆ.
ಮುಂದಿನ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರ ಆದೇಶಿಸಿದ್ದು, ಇಂದು ಕೆಆರ್‌ಎಸ್‌ನಿಂದ 2,171 ಕ್ಯೂಸೆಕ್, ಕಬಿನಿಯಿಂದ 1,663 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಇದನ್ನೂ ಓದಿ: ಸೆ.21ರಂದು ಸುಪ್ರೀಂಗೆ ಕೆಆರ್‌ಎಸ್ ಚಿತ್ರಣ ಮನವರಿಕೆ ಮಾಡಿ – ಪ್ರತಿಭಟನಾಕಾರರ ಆಕ್ರೋಶ
ಅಲ್ಲಿಗೆ ಒಟ್ಟು ಎರಡು ಡ್ಯಾಂಗಳಿಂದ 3,834 ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಉಳಿಕೆ 1,166 ಕ್ಯೂಸೆಕ್ ನೀರು ನಿನ್ನೆ ಡ್ಯಾಂ ಕೆಳ ಪ್ರದೇಶದಲ್ಲಿ ಬಿದ್ದ ಮಳೆಯ ನೀರಿನಿಂದ ತಮಿಳುನಾಡು (Tamil Nadu) ಸೇರುತ್ತಿದೆ. ಅಲ್ಲಿಗೆ ಇಂದು CWMA ಆದೇಶದಂತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಇದನ್ನೂ ಓದಿ: ಎಲ್ಲಾ ವಿಘ್ನಕ್ಕೆ ನಾಯಕ ವಿನಾಯಕ, ಎಲ್ಲರಿಗೂ ಸಮಾಧಾನ ತರಲಿ – 3 ಡಿಸಿಎಂ ಹುದ್ದೆ ಹೇಳಿಕೆಗೆ ಡಿಕೆಶಿ ಅಸಮಾಧಾನ
KRS ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 124.80 ಅಡಿಗಳು.
ನೀರಿನ ಮಟ್ಟ: 97.06 ಅಡಿಗಳು.
ಒಳಹರಿವು: 7,007 ಕ್ಯೂಸೆಕ್
ಹೊರಹರಿವು: 5,735 ಕ್ಯೂಸೆಕ್
ಇಂದಿನ ಸಂಗ್ರಹ: 20.592 ಟಿಎಂಸಿ
ಗರಿಷ್ಠ ಸಂಗ್ರಹ: 49.452 ಟಿಎಂಸಿ
Web Stories