ನವದೆಹಲಿ: ದೇಶದ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಕೇವಲ ಒಂದೇ ತಿಂಗಳಲ್ಲಿ 3.78 ಕೋಟಿಗೂ ಅಧಿಕ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ.
ಮಂಗಳವಾರದಂದು ಬಿಜೆಪಿ ಕೈಗೊಂಡಿದ್ದ ಸದಸ್ಯತ್ವ ಅಭಿಯಾನ ಅಂತ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 6ರಂದು ವಾರಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಜುಲೈ 6ರಿಂದ ಆಗಸ್ಟ್ 20ರವರೆಗೆ ಬರೋಬ್ಬರಿ 3,78,67,753 ಮಂದಿ ಹೊಸ ಸದಸ್ಯರು ಬಿಜೆಪಿ ಸೇರಿದ್ದಾರೆ. ಈ ಮೂಲಕ ಬಿಜೆಪಿ ಗುರಿ ಹೊಂದಿದ್ದಕ್ಕಿಂತ 1.6 ಕೋಟಿಗೂ ಅಧಿಕ ಸದಸ್ಯರು ಪಕ್ಷಕ್ಕೆ ಸೇರಿದ್ದಾರೆ.
Advertisement
ಈ ಬಗ್ಗೆ ಪಕ್ಷದ ಉಪಾಧ್ಯಕ್ಷ ಹಾಗೂ ಸದಸ್ಯತ್ವ ಅಭಿಯಾನದ ಸಂಚಾಲಕ ದುಶ್ಯಂತ್ ಕುಮಾರ್ ಗೌತಮ್ ಮಾತನಾಡಿ, ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ನಾವು ಹೊಸ ಸದಸ್ಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನೂ ಕೆಲವು ದಿನಗಳು ಸದಸ್ಯತ್ವ ಅಭಿಯಾನ ನಡೆಯಲಿದ್ದು, ಈ ಅವಧಿ ಮುಗಿಯುವ ವೇಳೆಗೆ ಹೊಸ ಸದಸ್ಯರ ಸಂಖ್ಯೆ 5 ಲಕ್ಷಕ್ಕೆ ತಲುಪಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಬಿಜೆಪಿಯಲ್ಲಿ ಸುಮಾರು 11 ಕೋಟಿ ಸದಸ್ಯರಿದ್ದು, ಈ ಅಭಿಯಾನದ ಮೂಲಕ ಸದಸ್ಯರ ಸಂಖ್ಯೆಯನ್ನು 20% ಅಂದರೆ 2.2 ಕೋಟಿ ಹೆಚ್ಚುಸುವ ಗುರಿ ಹೊಂದಿತ್ತು. ಆದರೆ ಪಕ್ಷದ ಗುರಿಯನ್ನು ಮೀರಿ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸದ್ಯ ಹೊಸ ಸದಸ್ಯರ ಸಂಪೂರ್ಣ ವಿವರಗಳನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಮುಗಿಯುವುದೊಂದೆ ಬಾಕಿ ಉಳಿದಿದೆ.
Advertisement
ಪಶ್ಚಿಮ ಬಂಗಾಳದಲ್ಲಿ 36 ಲಕ್ಷ ಮಂದಿ, ಉತ್ತರ ಪ್ರದೇಶದಲ್ಲಿ 65 ಲಕ್ಷ, ಗುಜರಾತಿನಲ್ಲಿ 34 ಲಕ್ಷ, ದೆಹಲಿಯಲ್ಲಿ 15 ಲಕ್ಷ ಹೀಗೆ ದೇಶದ ಹಲವು ರಾಜ್ಯಗಳಿಂದು 3.78 ಲಕ್ಷಕ್ಕೂ ಅಧಿಕ ಮಂದಿ ಬಿಜೆಪಿ ಸೇರಿದ್ದಾರೆ.
ಈ ಸದಸ್ಯತ್ವ ಅಭಿಯಾನದಲ್ಲಿ ಆನ್‍ಲೈನ್ ಮೂಲಕ ಕೂಡ ಲಕ್ಷಾಂತರ ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಮೋದಿ ಆ್ಯಪ್ ಮತ್ತು ಬಿಜೆಪಿ ಅಧಿಕೃತ ವೆಬ್‍ಸೈಟ್ ಮೂಲಕ ಹೊಸ ಸದಸ್ಯರು ನೊಂದಣಿಯಾಗಿದ್ದಾರೆ.
ಸದಸ್ಯತ್ವ ಅಭಿಯಾನ ಪೂರ್ಣಗೊಂಡ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಪಕ್ಷ ಸಮೀಕ್ಷೆ ಆರಂಭಿಸಲಿದೆ. ಹಾಗೆಯೇ ರಾಷ್ಟ್ರೀಯ ಪರಿಷತ್ ಸದಸ್ಯರ ಚುನಾವಣೆ ಡಿಸೆಂಬರ್ ನಲ್ಲಿ ನಡೆಯಲಿದೆ. ಜೊತೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪಕ್ಷಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಚಿಂತನೆ ನಡೆಸುತ್ತಿದ್ದಾರೆ.