– ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಸ್ಫೋಟಕ ಮಾಹಿತಿ
ಪೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಸಂಭವಿಸಿದ ಭಾರೀ ಭೂಕುಸಿತದಿಂದ 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿರಬಹುದು ಎಂದು ಇಲ್ಲಿನ ಸರ್ಕಾರ ವಿಶ್ವಸಂಸ್ಥೆಗೆ (UN) ತಿಳಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರವು (National Disaster Centre) ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಸುಮಾರು 670 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಆದ್ರೆ ಸೋಮವಾರ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿರಬಹುದು ಎಂಬ ಅಂಶವನ್ನು ಉಲ್ಲೇಖಿಸಿದೆ.
Advertisement
Advertisement
ಅಲ್ಲದೇ ಕಟ್ಟಡಗಳು ನಾಶವಾಗಿವೆ, ಆಹಾರ ಬೆಳೆಗಳು ನಾಶವಾಗಿದ್ದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಗತ್ತನ್ನೇ ಬೆಚ್ಚಿ ಬೀಳಿಸಿದ ಸೋಂಕಿತ ರಕ್ತ ಹಗರಣ – ಯುಕೆಯಲ್ಲಿ ಡೆಡ್ಲಿ ಚಿಕಿತ್ಸೆ ತಂದ ವಿಪತ್ತು; ಏನಿದು ಹಗರಣ?
Advertisement
ಭೂಕುಸಿತ ಉಂಟಾದ ಪ್ರದೇಶದಲ್ಲಿ ಸುಮಾರು 4,000 ಜನ ವಾಸಿಸುತ್ತಿದ್ದರು. ಈ ಪೈಕಿ 1,250 ಮಂದಿ ಆಶ್ರಯ ಕಳೆದುಕೊಂಡಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ದೇಶದ ಕೇರ್ ಇಂಟರ್‌ನ್ಯಾಷನಲ್ ಸಂಸ್ಥೆ ನಿರ್ದೇಶಕ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Advertisement
ಭೂಕುಸಿತಕ್ಕೆ ಮನೆಗಳು ಸುಮಾರು 26.3 ಅಡಿಗಳಷ್ಟು ಆಳಕ್ಕೆ ಹೂತುಹೋಗಿವೆ. ಭೂಕುಸಿತ ಮುಂದುವರಿದ ಕಾರಣ ಪರಿಸ್ಥಿತಿ ಅಸ್ಥಿರವಾಗಿಯೇ ಇದೆ. ಇದು ರಕ್ಷಣಾ ತಂಡಗಳು ಮತ್ತು ಬದುಕುಳಿದವರಿಗೂ ಅಪಾಯ ಉಂಟು ಮಾಡುವ ಸಾಧ್ಯತೆಗಳಿವೆ. ಪಪುವಾ ನ್ಯೂಗಿನಿಯಾದ ಅಭಿವೃದ್ಧಿ ಪಾಲುದಾರರಿಗೆ ಇತರ ಅಂತಾರಾಷ್ಟ್ರೀಯ ಸ್ನೇಹಿತರಿಗೆ ದೇಶದ ಪರಿಸ್ಥಿತಿಯ ಬಗ್ಗೆ ತಿಳಿಸಿ ಸಹಾಯ ಹಸ್ತ ಚಾಚುವಂತೆ ವಿಶ್ವಸಂಸ್ಥೆಯನ್ನು ಕೋರಿದೆ ಎಂದು ಸರ್ಕಾರ ತಿಳಿಸಿದೆ.
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಕಲ್ಲುಮಣ್ಣಿನ ಅಡಿ ಸಿಲುಕಿರುವ ನೂರಾರು ಜನರ ಹುಡುಕಾಟದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಜನರೂ ಕೈಜೋಡಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ; ಒಸ್ಟ್ರಾವಾ ಗೋಲ್ಡನ್ ಸ್ಪೈಕ್-2024ನಿಂದ ಹೊರಕ್ಕೆ