– ಪೊಲೀಸರ ವಿರುದ್ಧವೇ ಕಿರುಕುಳ ಆರೋಪ
ಚಿಕ್ಕಬಳ್ಳಾಪುರ: ಸೈಡ್ ಪಿಕಪ್ ಹೆಸರಿನಲ್ಲಿ ನಮ್ಮ ಯಾತ್ರಿ ಹಾಗೂ ರ‍್ಯಾಪಿಡ್ ಚಾಲಕರಿಗೆ (Airport Taxi Drivers) ಕಿರುಕುಳ ನೀಡುತ್ತಿರುವ ಆರೋಪದ ಮೇಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಪೊಲೀಸರು (Airport Police) ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಸೈಡ್ ಪಿಕಪ್ ಆರೋಪದ ಮೇಲೆ ಟ್ಯಾಕ್ಸಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರಿಂದು ಏರ್ಪೋರ್ಟ್‌ನ ಕೆಎಸ್‌ಟಿಡಿಸಿ (KSTDC) ಚಾಲಕರು ಹಾಗೂ ಪೊಲೀಸರೇ ಕಿರುಕುಳ ನೀಡುತ್ತಿರುವುದಾಗಿ ನಮ್ಮಯಾತ್ರಿ, ರ‍್ಯಾಪಿಡ್ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ
ಪ್ರಯಾಣಿಕರನ್ನು ಪಿಕಪ್ ಮಾಡಲು ಬಂದಿದ್ದ 20ಕ್ಕೂ ಅಧಿಕ ಟ್ಯಾಕ್ಸಿಗಳನ್ನ ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ. ನಿನ್ನೆ ಸಂಜೆಯಿಂದ ಟ್ಯಾಕ್ಸಿಗಳನ್ನ ಬಿಡದೇ ಕುರುಕುಳ ಕೊಡು್ತಿದ್ದಾರೆ. ಹಬ್ಬದ ದಿನವೂ ಟ್ಯಾಕ್ಸಿ ಬಿಡದೇ ಸತಾಯಿಸುತ್ತಿದ್ದಾರೆ, ಅಂತ ಠಾಣೆ ಎದುರೇ ಬೀಡುಬಿಟ್ಟಿರುವ ಟ್ಯಾಕ್ಸಿ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು | ಕ್ಯಾತಮಾರನಹಳ್ಳಿ ವಿವಾದಿತ ಸ್ಥಳದಲ್ಲಿ ಮದರಸಾ ತೆರೆಯಲು ಡಿಸಿ ಅನುಮತಿ – ಗ್ರಾಮಸ್ಥರ ಆಕ್ರೋಶ
ನಿನ್ನೆ ಸಂಜೆ ಪಿಕಪ್‌ಗೆ ಬಂದಿದ್ದ ಟ್ಯಾಕ್ಸಿಗಳ ಕೀ ಕಿತ್ತುಕೊಂಡು ಕರ್ನಾಟಕ ಪ್ರವಾಸೋದ್ಯಮ ಟ್ಯಾಕ್ಸಿ ಚಾಲಕರೇ ಪೊಲೀಸರಿಗೆ ನೀಡಿದ್ದಾರೆ. ಅವರಿಗೆ ಬಾಡಿಗೆ ಸಿಕ್ಕಿಲ್ಲ ಅಂತ ನಮ್ಮ ಮೇಲೆ ಪ್ರಹಾರ ಮಾಡ್ತಿದ್ದಾರೆ. 2 ದಿನಗಳ ಕಾಲ ಟ್ಯಾಕ್ಸಿ ನಿಲ್ಲಿಸಿದ್ರೆ ನಮ್ಮ ಜೀವನ ಹೇಗೆ ನಡೆಯುತ್ತೆ? ನಮಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮುಂದೆ ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಪರಮೇಶ್ವರ್