ಚಿಕ್ಕಮಗಳೂರು: ನಗರದ ಎಐಟಿ ಕಾಲೇಜಿನ 20ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಎಐಟಿ ಕಾಲೇಜಿಗೆ ಸೇರಿದ ಹಾಸ್ಟೆಲ್‍ನ ವಿದ್ಯಾರ್ಥಿನಿಯರು ಊಟ ಹಾಗು ನೀರು ಸೇವಿಸಿ ವಾಂತಿ, ಬೇದಿ, ಜ್ವರದಿಂದ ಬಳಲುತ್ತಿದ್ದಾರೆ. ಸಾಕಷ್ಟು ವಿದ್ಯಾರ್ಥಿನಿಯರು ಜಿಲ್ಲಾ ಆಸ್ಪತ್ರೆ ಸೇರಿದ್ರೆ, ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Advertisement
ಕಳೆದ ಒಂದು ವಾರದಿಂದ ವಾರ್ಡನ್‍ಗೆ ನೀರು ಸರಿಯಿಲ್ಲ, ಊಟ ಸರಿಯಿಲ್ಲ ಅಂತ ಹೇಳಿದ್ರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಊಟ ಹಾಗೂ ನೀರಿನಿಂದ ಈ ರೀತಿ ಸಮಸ್ಯೆಯಾಗಿದೆ ಅಂತ ವೈದ್ಯರು ಹೇಳಿದ್ದಾರೆ. ಇನ್ನೂ ಎರಡು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.
Advertisement
Advertisement