ಕಾರವಾರ: ವಸತಿ ಹಾಸ್ಟೆಲ್ ನಲ್ಲಿ ಸ್ವಚ್ಛತೆ ಇರದ ಕಾರಣ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಚರ್ಮರೋಗ ಕಾಣಿಸಿಕೊಂಡು ಪೋಷಕರು ಆಡಳಿತವರ್ಗವನ್ನು ತರಾಟೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡಿನ ಪಾಳ ಗ್ರಾಮದ ಸಮಾಜಕಲ್ಯಾಣ ಇಲಾಖೆಯ ಇಂದಿರಾಗಾಂಧಿ ಹಾಸ್ಟೆಲ್ (IndiraGandhi) ನಲ್ಲಿ ನಡೆದಿದೆ.
6 ರಿಂದ 10 ನೇ ತರಗತಿವರಗೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಸತಿಯೊಂದಿಗೆ ವ್ಯಾಸಂಗ ಮಾಡುತ್ತಿದ್ದು, 10ನೇ ತರಗತಿಯ 6 ವಿದ್ಯಾರ್ಥಿಗಳಲ್ಲಿ ಇತರೆ ತರಗತಿಯ 9 ವಿದ್ಯಾರ್ಥಿಗಳಲ್ಲಿ ವಿವಿಧ ಚರ್ಮರೋಗಗಳು ಕಾಣಿಸಿಕೊಂಡಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಈ ವಿದ್ಯಾರ್ಥಿಗಳನ್ನು ವೈದ್ಯರಿಗೆ ತೋರಿಸದೇ ಅಸಡ್ಡೆ ಮಾಡಿದ್ದು, ಮತ್ತಷ್ಟು ವಿದ್ಯಾರ್ಥಿಗಳಿಗೆ ಚರ್ಮರೋಗ ಕಾಣಿಸಿಕೊಂಡಿದೆ. ಇಂದು ಪೋಷಕರು ಹಾಸ್ಟೆಲ್‍ಗೆ ಆಗಮಿಸಿ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 6 ತಿಂಗಳ ಹಿಂದೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
Advertisement
Advertisement
ಮಲೀನ ನೀರು ಪೂರೈಕೆ: ಹಾಸ್ಟೆಲ್ ಅನ್ನು ಖಾಸಗಿ ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ಇಲ್ಲಿಯ ಬಾವಿಯ ನೀರು ಸಂಪೂರ್ಣ ಕಲುಷಿತವಾಗಿದ್ದು, ಬಾವಿಯನ್ನು ಶುದ್ಧೀಕರಿಸುವ ಕೆಲಸ ಈವರೆಗೂ ಆಗಿಲ್ಲ. ಈ ಬಾವಿಯ ನೀರನ್ನೇ ಮಕ್ಕಳಿಗೆ ಕುಡಿಯಲು ಹಾಗೂ ಸ್ನಾನಕ್ಕೆ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಮಕ್ಕಳಿಗೆ ಚರ್ಮರೋಗ, ಜ್ವರ ಸೇರಿದಂತೆ ಇತರೆ ಕಾಯಿಲೆಗಳು ಬರುತ್ತಿದೆ. ಈ ಕುರಿತು ಹಾಸ್ಟೆಲ್ ನ ಸಿಬ್ಬಂದಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k