ಕಲಬುರಗಿ: ಜಿಲ್ಲೆಯಲ್ಲಿ ಕುರುಡು ಕಾಂಚಾಣ ಭಾರೀ ಸದ್ದು ಮಾಡಿದ್ದು, ಆದಾಯ ತೆರಿಗೆ (Income Tax) ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ‘ಕೈ’ (Congress) ನಾಯಕರಿಗೆ ಸೇರಿದ ಕಾರಿನಲ್ಲಿ ಪತ್ತೆಯಾದ 2 ಕೋಟಿಗೂ ಅಧಿಕ ಹಣವನ್ನು ಸೀಜ್ (Money Seize) ಮಾಡಿದ್ದಾರೆ.
ಕಲಬುರಗಿ (Kalaburagi) ರೈಲ್ವೆ ನಿಲ್ದಾಣದಿಂದ ಹಣ ಸಾಗಾಟ ಮಾಡುತ್ತಿದ್ದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೇರೆ ರಾಜ್ಯದಿಂದ ರೈಲು ಮೂಲಕ ಕಲಬುರಗಿ ರೈಲು ನಿಲ್ದಾಣಕ್ಕೆ ಹಣ ಬಂದಿತ್ತು. ರೈಲ್ವೆ ನಿಲ್ದಾಣದಿಂದ ಇನ್ನೋವಾ ಕಾರಿನಲ್ಲಿ ಹಣ ಸಾಗಾಟಕ್ಕೆ ಯತ್ನಿಸಿದ ಸಂದರ್ಭ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ
ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕಾರು ಸಮೇತ ಹಣವನ್ನು ಸೀಜ್ ಮಾಡಿದ್ದು, ಕಲಬುರಗಿಯ ಖರ್ಗೆ ಸರ್ಕಲ್ ಬಳಿ ಇರುವ ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಹಣದ ಸಮೇತ ವಾಹನ ಸೀಜ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಯಲ್ಲಿ ಸೈನಿಕರು ಸತ್ತಾಗ ಮಂಗಳಸೂತ್ರ ಕಿತ್ತುಕೊಂಡಿದ್ಯಾರು: ಬಿ.ಕೆ ಹರಿಪ್ರಸಾದ್ ಪ್ರಶ್ನೆ