– ಜಪಾನಿನ ಹಡಗಿನಲ್ಲಿದ್ದ ಮತ್ತಿಬ್ಬರು ಭಾರತೀಯರಲ್ಲಿ ಸೋಂಕು ಪತ್ತೆ
ಬೀಜಿಂಗ್: ಮಾರಕ ಕೊರೊನಾ ವೈರಸ್‍ಗೆ ಚೀನಾದಲ್ಲಿ ತತ್ತರಿಸಿ ಹೋಗಿದ್ದು, ದಿನದಿಂದ ದಿನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೆ ಸುಮಾರು 1,770 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದು, ಸುಮಾರು 70,500ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಚೀನಾದ ಹುಬೈ ಪ್ರಾಂತ್ಯವೊಂದರಲ್ಲೇ ಕೊರೊನಾಗೆ ಅತಿ ಹೆಚ್ಚು ಮಂದಿ ಬಲಿಯಾಗಿದ್ದು, ಭಾನುವಾರ ಒಂದೇ ದಿನದಲ್ಲಿ ಸುಮಾರು 100 ಮಂದಿಯನ್ನು ಕೊರೊನಾ ಬಲಿಪಡೆದಿದೆ. 1,900ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಕೊರೊನಾದಿಂದ ಪಾರಾಗಲು ಹರ್ಬಲ್ ತಾಯತ ಮೊರೆ ಹೋದ ಟಿಬೆಟಿಯನ್ನರು
ಕೊರೊನಾ ತಡೆಗಟ್ಟಲು ಚೀನಾ ಸರ್ಕಾರ ಹೊಸ ನಿರ್ಬಂಧಗಳನ್ನು ಜಾರಿಗೆ ತರುತ್ತಿದ್ದರೂ ಸಾವಿನ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಭಾನುವಾರ ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ಪ್ರಕರಣ ಶೇ. 5ರಷ್ಟು ಏರಿಕೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಭಾನುವಾರ ಒಟ್ಟು 139 ಮಂದಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್‍ಗೆ ಭಾರತೀಯ ವಿಜ್ಞಾನಿಯಿಂದ ಔಷಧಿ
ಇತ್ತ ಚೀನಾದ ವುಹಾನ್ ನಗರವೊಂದರಲ್ಲೇ ಶೇ.90ರಷ್ಟು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ವುಹಾನ್‍ನಲ್ಲಿ ಇರುವ ಜನಸಂಖ್ಯೆ 1.1 ಕೋಟಿ ಇದ್ದು, ಚೀನಾ ಹೊರತುಪಡಿಸಿ ಉಳಿದೆಡೆ ಒಟ್ಟು 500 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ 5 ಮಂದಿ ಸಾವನ್ನಪ್ಪಿದ್ದಾರೆ.
ಡೈಮಂಡ್ ಪ್ರಿನ್ಸೆನ್ ಹಡಗಿನಲ್ಲಿ ಕೊರೊನಾ:
ಜಪಾನಿನ ಡೈಮಂಡ್ ಪ್ರಿನ್ಸೆನ್ ಹಡಗಿನಲ್ಲಿ ಹೊಸದಾಗಿ 70 ಪ್ರಯಾಣಿಕರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಫೆಬ್ರವರಿ 3ರಿಂದ ಹಡಗನ್ನು ಯಾಕೋಹಾಮಾ ಬಂದರಿನಲ್ಲಿ ತಡೆಯಲಾಗಿದ್ದು, ಈವರೆಗೆ ಒಟ್ಟು 355 ಪ್ರಯಾಣಿಕರಿಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್‍ನಿಂದ ಆಸ್ಪತ್ರೆ ಸೇರಿದ ತಂದೆ – ಹಸಿವಿನಿಂದ ಬಳಲಿ ಶವವಾದ ವಿಶೇಷಚೇತನ ಮಗ
ಹಡಗಿನಲ್ಲಿರುವ ಒಟ್ಟು 3,711 ಮಂದಿ ಬೇರೆ ಬೇರೆ ದೇಶದ ಪ್ರಯಾಣಿಕರಿದ್ದು, ಅವರಲ್ಲಿ 132 ಮಂದಿ ಸಿಬ್ಬಂದಿ ಹಾಗೂ 6 ಮಂದಿ ಪ್ರಯಾಣಿಕರು ಸೇರಿ ಒಟ್ಟು 138 ಭಾರತೀಯರಿದ್ದಾರೆ. ಈ ಪೈಕಿ ಮತ್ತಿಬ್ಬರು ಭಾರತೀಯರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಭಾನುವಾರ ಕೋವಿಡ್-19 ಇರುವವರ ಸಂಖ್ಯೆ 355ಕ್ಕೆ ಏರಿಕೆಯಾಗಿದೆ.