ಮೈಸೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಭಾರೀ ಪ್ರವಾಹ ಹಿನ್ನೆಲೆಯಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ಆಶ್ರಯ ಅರಸಿ 15ಕ್ಕೂ ಹೆಚ್ಚು ಕೊಡಗಿನ ಜನ ಮೈಸೂರಿಗೆ ಬಂದಿದ್ದಾರೆ.
ಮಡಿಕೇರಿಯ ಮುಕೋಡಲು ಗ್ರಾಮದ ನಿವಾಸಿಗಳು, ಬೆಟ್ಟಗಳನ್ನು ಹತ್ತಿ 10 ಕಿಲೋ ಮೀಟರ್ ನಡೆದು ಜೀವ ಉಳಿಸಿಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಇಂತಹ ಪ್ರಳಯ ಕಂಡಿಲ್ಲ. ಕಣ್ಣೇದುರೆ ತೋಟ ಮನೆ ನೀರು ಪಾಲಾಗಿದೆ. ನಮ್ಮಂತೆ ನೂರಾರು ಜನ ಪ್ರವಾಹದಲ್ಲಿ ಸಿಲುಕಿದ್ದಾರೆ. ನಾವು ಪೂರ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ತಿನ್ನಲು ಅನ್ನವಿಲ್ಲದೆ ಅನಾಥರಾಗಿದ್ದೇವೆ. ಸರ್ಕಾರ ನಮಗೆ ನೆರೆವು ನೀಡಬೇಕು ಎಂದು ಸಂತ್ರಸ್ತರು ಅಳಲು ತೊಡಿಕೊಂಡಿದ್ದಾರೆ.
Advertisement
Advertisement
ಕೊಡಗಿನಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರು ಬೀದಿಪಾಲಾಗಿದ್ದು, ಅವರ ಸಹಾಯಕ್ಕೆ ರಾಜ್ಯದ ಜನರು ಮುಂದಾಗಿದ್ದಾರೆ. ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ನಾಡಿನ ಜನತೆ ತಮ್ಮ ಕೈಲಾದ ಸಹಾಯವನ್ನು ಕೊಡಗು ಜನರಿಗೆ ಮಾಡುತ್ತಿದ್ದಾರೆ. ಕುಡಿಯಲು ನೀಡು, ತಂಡಿ, ಹೊದಿಕೆ ಮತ್ತು ಕೈಲಾದಷ್ಟು ಹಣವನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಅವರಿಗೆ ರಸ್ತೆ ರಸ್ತೆಗಳಲ್ಲಿ ನಿಧಿ ಸಂಗ್ರಹಿಸಿ ಕೊಡುತ್ತಿದ್ದಾರೆ.
Advertisement
Advertisement
ಕೊಡಗಿನಲ್ಲಿ ಉಂಟಾದ ಜಲಪ್ರಳಯದ ಬಗ್ಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದು, ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದ ಹಾನಿಯಾಗಿದ್ದು, ಉದಾರವಾಗಿ ನೆರವು ನೀಡುವಂತೆ ನಾಡಿನ ಜನರಿಗೆ ಮನವಿ ಮಾಡಿಕೊಂಡರು. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ, ಕಾಫಿ, ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಮಾಹಿತಿಯ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇತ್ತ ಕಾಫಿ ಬೋರ್ಡ್ ಅಧಿಕಾರಿಗಳಿಗೂ ಸೂಚಿಸಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಏಪ್ರಿಲ್‍ನಿಂದ ಇಲ್ಲಿವರೆಗೆ 153 ಮಂದಿ ಮೃತಪಟ್ಟಿದ್ದಾರೆ. 11,427 ಮನೆಗಳು ನಾಶವಾದರೆ, 700ಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಕೊಡಗಿನಲ್ಲಿ 7 ಜನ ಮೃತ ಪಟ್ಟಿದ್ದಾರೆ ಹಾಗೂ 800ಕ್ಕೂ ಹೆಚ್ಚು ಮನೆ ನಾಶವಾಗಿವೆ. ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿ ಕುಮಾರಸ್ವಾಮಿ ಕೊಡಗು ಜಿಲ್ಲೆಯ ಅಭಿವೃದ್ಧಿಗೆ 100 ಕೋಟಿ ರೂ. ಪರಿಹಾರ ಘೋಷಣೆಯಾಗಿದ್ದು, ಇದರಲ್ಲಿ 30 ಕೋಟಿ ರೂ.ವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ 2 ರಿಂದ 2.50 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv