ರಿಯಾದ್: ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಯೋಗ ಉತ್ಸವ ಆಯೋಜನೆಗೊಂಡಿದೆ. ಜನವರಿ 29ರಂದು ಪ್ರಾರಂಭವಾದ ಕಾರ್ಯಕ್ರಮದಲ್ಲಿ 1 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ.
ಜೆಡ್ಡಾದಲ್ಲಿರುವ ಕಿಂಗ್ ಅಬ್ದುಲ್ಲಾಎಕನಾಮಿಕ್ ಸಿಟಿಯಲ್ಲಿನ ಜುಮನ್ ಪಾರ್ಕ್‌ನಲ್ಲಿ ಯೋಗ ಉತ್ಸವ ನಡೆಯುತ್ತಿದ್ದು, ಫೆಬ್ರವರಿ 1ರ ವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಸೌದಿ ಯೋಗ ಸಮಿತಿ ಆಯೋಜಿಸಿದ್ದು, ಬಹುತೇಕ ಸೌದಿಯ ಯೋಗ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರು ಸೇನಾನಿಗಳಂತೆ ಕೆಲಸ ಮಾಡಿದ್ದಾರೆ: ಕೋವಿಂದ್
Advertisement
Advertisement
ಸೌದಿ ಅರೇಬಿಯಾದ ಒಲಿಂಪಿಕ್ ಸಮಿತಿ ಸ್ಥಾಪಿಸಿರುವ ಸೌದಿ ಯೋಗ ಸಮಿತಿ ಸರ್ಕಾರಿ ಭಾಗವಾಗಿದ್ದು, 2021ರ ಮೇ 16ರಂದು ಯೋಗವನ್ನು ಉತ್ತೇಜಿಸಲು ಪ್ರಾರಂಭವಾಯಿತು. ನೌಲ್ ಅಲ್ ಮರ್ವಾಯ್ ಅವರನ್ನು ಈ ಸಂಸ್ಥೆಯ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಸೌದಿ ಯೋಗ ಸಮಿತಿ ಹಾಗೂ ಆಯುಶ್ ಸಚಿವಾಲಯ ಈ ಉತ್ಸವದಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಮಾರಾಮಾರಿ – ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್
Advertisement
ಭರತ ಹಾಗೂ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಜಂಟಿಯಾಗಿ ಯೋಗ ಕಾರ್ಯಕ್ರಮ ಆಯೋಜಿಸಿದೆ. ಯೋಗ ತರಬೇತಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದ ಅರವ್ ಪ್ರದಿಶಾ ಅವರನ್ನು ಸನ್ಮಾನಿಸಲಾಗಿದೆ.