ಹವಾನಾ: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ವಿಮಾನ ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಹವಾನಾದ ಜೋಸ್ ಮರ್ತಿ ಅಂತಾರಾಷ್ಷ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಅದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 104 ಜನ ಪ್ರಯಾಣಿಕರಲ್ಲಿ ಬದುಕುಳಿದಿರುವುದು 3 ಜನ ಮಾತ್ರ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.
Advertisement
ಸುಮಾರು 39 ವರ್ಷ ಹಳೆಯ ಬೋಯಿಂಗ್ 737 ವಿಮಾನ ಇದಾಗಿತ್ತು. ಮೆಕ್ಸಿಕನ್ ಏರ್ ಲೈನ್ಸ್ ಗೆ ಸೇರಿದ ವಿಮಾನವಾಗಿದ್ದು ಕ್ಯೂಬಾನಾ ಏವಿಯೇಶನ್ ಗೆ ಲೀಸ್ ಕೊಡಲಾಗಿತ್ತು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
Advertisement
ಚಾರ್ಟ್‍ರ್ ವಿಮಾನವಾಗಿದ್ದು ವಿಮಾನ ನಿಲ್ದಾಣದಿಂದ 6 ಮೈಲಿಗಳ ದೂರದಲ್ಲಿ ಪತನಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ ಆದರೆ ಆ ವೇಳೆಗೆ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ.
Advertisement
ಹಲವು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು ಪರಿಹಾರ ಕಾರ್ಯ ಬಿರುಸಿನಿಂದ ಸಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕ್ಯೂಬಾ ಅಧ್ಯಕ್ಷ ಮಿಗ್ಯುಯೆಲ್ ಡಯಾಸ್ ಕ್ಯಾನೆಲ್ ಹೇಳಿದ್ದಾರೆ.