ಬೆಂಗಳೂರು: ಸಿನಿಮಾ ಎಂದರೆ ಅನೇಕ ಪಾತ್ರಗಳು ಬರುತ್ತವೆ. ಒಂದೊಂದು ಪಾತ್ರವೂ ತನ್ನದೇ ಆದ ಪಾಮುಖ್ಯತೆಯನ್ನು ಹೊಂದಿರುತ್ತವೆ. ಅದರಲ್ಲೂ ಪೊಲೀಸ್ ಅಧಿಕಾರಿಗಳ ಪಾತ್ರ ಎಂದರೆ ಖಡಕಾಗಿ ಇರುತ್ತವೆ. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಲ್ಲಂತೂ ನಿರ್ದೇಶಕರು ಖಾಕಿಗಳನ್ನು ಹೀರೋಗಳಂತೆ ತೋರಿಸುತ್ತಿದ್ದು, ಪೊಲೀಸ್ ಪಾತ್ರಕ್ಕೆ ಹೈಪರ್ ಕ್ರಿಯೇಟ್ ಮಾಡಿದ್ದಾರೆ.
ಸ್ಯಾಂಡಲ್‍ವುಡ್‍ನಲ್ಲಿ ದಶಕಗಳಿಂದಲೂ ಪೊಲೀಸ್ ಪಾತ್ರಗಳು ತೆರೆಯ ಮೇಲೆ ಭರ್ಜರಿಯಾಗಿ ಮಿಂಚಿದ್ದಾವೆ. ಹಿಂದೆ ನಟ ಶಂಕರ್ ನಾಗ್, ಸಾಯಿ ಕುಮಾರ್, ದೇವರಾಜ್ ಸೇರಿದಂತೆ ಅನೇಕ ನಟರು ಖಡಕ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ಖಾಕಿಗಳಿಗೆ ವಿಶೇಷ ಗೌರವ ತಂದು ಕೊಟ್ಟಿದ್ದರು. ಮುಂದುವರಿದಂತೆ ಶಿವಣ್ಣ, ದರ್ಶನ್ ಮತ್ತು ಸುದೀಪ್ ಕೂಡ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೆ ಸ್ಯಾಂಡಲ್‍ವುಡ್‍ನಲ್ಲಿ ಖಾಕಿಗಳ ಅಬ್ಬರ ಶುರುವಾಗಿದೆ.
Advertisement
Advertisement
‘ಕೆಂಪೇಗೌಡ 2′ ಚಿತ್ರದಲ್ಲಿ ಕೋಮಲ್, `100′ ಹೆಸರಿನ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, `ಇನ್ಸ್ ಪೆಕ್ಟರ್ ವಿಕ್ರಮ್’ ಚಿತ್ರದ ಪ್ರಜ್ವಲ್ ದೇವರಾಜ್ ಮತ್ತು `ಸಲಗ’ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಅವರು ಪೊಲೀಸ್ ಅಧಿಕಾರಿ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ತಿಂಗಳು ಬಿಡುಗಡೆಗೆ ಸಿದ್ಧವಾಗಿರುವ ‘ಕೆಂಪೇಗೌಡ 2’ ಸಿನಿಮಾದಲ್ಲಿ ನಟ ಕೋಮಲ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಲು ಕೋಮಲ್ ಅವರು ಬರೋಬ್ಬರಿ ಎರಡು ವರ್ಷ ಸಿದ್ಧತೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಫಿಟಾಗಿ ಕಾಣಿಸಿಕೊಳ್ಳಲು ಕೋಮಲ್ ಅವರು 20 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ.
Advertisement
ನಟ ಪ್ರಜ್ವಲ್ ದೇವರಾಜ್ ಕೂಡ ನರಸಿಂಹ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಇನ್ಸ್ ಪೆಕ್ಟರ್ ವಿಕ್ರಮ್’ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರ ಮಾಡಲು ತಯಾರಿ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ನಾನು ಕೂಡ ಪಾತ್ರಕ್ಕೆ ಒಂದಿಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.
Advertisement
ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಸಿನಿಮಾದಲ್ಲಿ ಟಗರು ಡಾಲಿ ಖ್ಯಾತಿಯ ಧನಂಜಯ್ ಮಾಲಾಧಾರಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಬಾಲ್ಯದಿಂದಲೂ ನನಗೆ ಪೊಲೀಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡಿದ್ದೆ, ಇದೀಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದೇನೆ. ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೇ ನನಗೆ ಪ್ರೇರಣೆ ಎಂದು ಧನಂಜಯ್ ಅವರು ತಿಳಿಸಿದ್ದಾರೆ.
ನಟ ರಮೇಶ್ ಅರವಿಂದ್ ಅವರು `100′ ಹೆಸರಿನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಆಗಿದ್ದರೂ ರಮೇಶ್ ಅವರು ಎರಡು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ‘ಭೈರಾದೇವಿ’ ಸಿನಿಮಾದಲ್ಲಿ ಕ್ರೈ ಬ್ರಾಂಚ್ ಪೊಲೀಸ್ ಆಗಿ, ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಪತ್ತೇದಾರಿ ಪಾತ್ರವನ್ನು ಮಾಡುತ್ತಿದ್ದಾರೆ.