ಈ ವಾರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ (Theatre) ಸಿಗುತ್ತಾ ಎನ್ನುವ ಆತಂಕ ಎದುರಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಸಾಮಾನ್ಯವಾಗಿ ತೆಲುಗು ಮತ್ತು ತಮಿಳಿನ ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಈ ಬಾರಿಯೂ ಅಂತಹ ದೊಡ್ಡ ಬಜೆಟ್ ಮತ್ತು ಹೆಸರಾಂತ ನಟರೇ ನಟಿಸಿರುವ ಚಿತ್ರಗಳು ತೆರೆ ಕಾಣುತ್ತಿವೆ. ಆ ನಟರ ಚಿತ್ರಗಳು ಕರ್ನಾಟಕದಲ್ಲೂ ಈ ಹಿಂದೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಹೀಗಾಗಿ ಕನ್ನಡ ಚಿತ್ರಗಳಿಗೆ ಅವುಗಳಿಂದಾಗಿ ನಾನಾ ಸಮಸ್ಯೆಗಳು ಎದುರಾಗಬಹುದು.
Advertisement
ತಮಿಳಿನ ಹೆಸರಾಂತ ನಟ ವಿಜಯ್ (Vijay) ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ವಾರಿಸು’ ಮತ್ತು ಅಜಿತ್ ಕುಮಾರ್ (Ajith) ನಟನೆಯ ‘ತುನಿವು’ ಸಿನಿಮಾ ಜನವರಿ 11 ರಂದು ತೆರೆ ಕಾಣುತ್ತಿವೆ. ತೆಲುಗಿನ ಖ್ಯಾತ ನಟ ಬಾಲಕೃಷ್ಣ (Balayya) ಮತ್ತು ಕನ್ನಡದ ದುನಿಯಾ ವಿಜಯ್ ವಿಲನ್ ಆಗಿ ನಟಿಸಿರುವ ‘ವೀರಸಿಂಹ ರೆಡ್ಡಿ’ ಚಿತ್ರ ಜನವರಿ 12 ರಂದು ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಅಲ್ಲದೇ, ಜನವರಿ 13ಕ್ಕೆ ಮೆಗಾಸ್ಟಾರ್ ಚಿರಂಜೀವಿ (Chiranjeevi) ನಟನೆಯ ‘ವಾಲ್ತೇರು ವೀರಯ್ಯ’ ಕೂಡ ರಿಲೀಸ್ ಆಗುತ್ತಿದೆ. ಈ ಸಿನಿಮಾಗಳಲ್ಲಿ ಕೆಲವು ಕನ್ನಡಕ್ಕೆ ಡಬ್ ಆಗಿಯೂ ಬಿಡುಗಡೆ ಆಗುತ್ತಿವೆ. ಹಾಗಾಗಿ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತವಾ ಎನ್ನುವುದೇ ಆತಂಕಕ್ಕೆ ಕಾರಣವಾಗಿವೆ. ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ
Advertisement
Advertisement
ಎದುರಾಗಬಹುದಾದ ಇಂತಹ ಆತಂಕವನ್ನು ಗಮನಿಸಿಯೇ ತೆಲುಗು ಚಿತ್ರರಂಗ ಈ ಹಿಂದೆ ತೀರ್ಮಾನವೊಂದನ್ನು ತಗೆದುಕೊಂಡಿದೆ. ಮೊದಲ ತೆಲುಗು ಸಿನಿಮಾಗಳಿಗೆ ಥಿಯೇಟರ್ ಕೊಡಬೇಕು. ನಂತರ ಇತರ ಭಾಷೆಯ ಚಿತ್ರಗಳಿಗೆ ಅವಕಾಶ ನೀಡಬೇಕು ಎಂದು. ಆದರೂ, ತೆಲುಗು ವಿತರಕ ದಿಲ್ ರಾಜು, ಈ ನಿಯಮಕ್ಕೆ ಸೆಡ್ಡು ಹೊಡೆದು ತಮಿಳಿನ ವಾರಿಸು ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ, ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಿಗೆ ರಿಲೀಸ್ ಮಾಡಲು ಹೊರಟಿದ್ದರು. ಈ ವಿಷಯದಲ್ಲಿ ಕೊನೆಗೂ ದಿಲ್ ರಾಜು ಸೋತಿದ್ದಾರೆ. ಚಿತ್ರೋದ್ಯಮದ ಒಗ್ಗಟ್ಟಿನ ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ಥಿಯೇಟರ್ ಗಳು ತೆಲುಗು ಚಿತ್ರಗಳಿಗೆ ಸಿಕ್ಕಿವೆ. ಅಲ್ಲದೇ ಡಬ್ ಸಿನಿಮಾ ರಿಲೀಸ್ ದಿನಾಂಕವನ್ನು ಅವರು ಮೂರು ದಿನಗಳ ಕಾಲ ಮುಂದೂಡಿದ್ದಾರೆ.
Advertisement
ಕನ್ನಡ ಚಿತ್ರೋದ್ಯಮದಲ್ಲಿ ಇಂತಹ ಯಾವುದೇ ನಿಯಮಗಳಿಲ್ಲ. ಒಗ್ಗಟ್ಟಿನ ಮಂತ್ರವೂ ಇಲ್ಲ. ಹಾಗಾಗಿ ದೊಡ್ಡ ದೊಡ್ಡ ಪರಭಾಷಾ ಚಿತ್ರಗಳು ತೆರೆಕಂಡಾಗ ಕನ್ನಡದ ನಿರ್ಮಾಪಕರು ಥಿಯೇಟರ್ ಗಾಗಿ ಪರದಾಡಿದ ಸಾಕಷ್ಟು ಉದಾಹರಣೆಗಳಿವೆ. ಈ ವಾರ ಕೂಡ ಕನ್ನಡದ ಅನೇಕ ಚಿತ್ರಗಳಿಗೆ ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳು ಸಿಗುವುದು ಅನುಮಾನ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k