ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು, ಕ್ರಮಾಂಕ ಬದಲಿಸಿಕೊಳ್ಳಲು ಮತ್ತಷ್ಟು ದಿನಗಳ ಅವಕಾಶವಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮುಂದಿನ ಆದೇಶದವರೆಗೂ ಅವಕಾಶ ನೀಡಿದೆ.ಇದನ್ನೂ ಓದಿ: ಮೋದಿ ರ‍್ಯಾಲಿ ವೇಳೆ ಸ್ಫೋಟ ಪ್ರಕರಣ – ನಾಲ್ವರು ಆರೋಪಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಬದಲಿಸಿದ ಪಾಟ್ನಾ ಹೈಕೋರ್ಟ್
Advertisement
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಮಾತನಾಡಿ, ಈ ಸಲುವಾಗಿ ಕೆಇಎ (KEA) ಪೋರ್ಟಲ್ ತೆರೆದಿರುತ್ತದೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಕುಳಿತು, ಆಯ್ಕೆಗಳನ್ನು ಬದಲಿಸಿಕೊಳ್ಳುವ ಅಥವಾ ತೆಗೆದು ಹಾಕುವ ಕೆಲಸವನ್ನು ಮಾಡಿಕೊಳ್ಳಬಹುದು. ಎಚ್ಚರಿಕೆಯಿಂದಲೇ ಈ ಕೆಲಸ ಮಾಡಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ವಿಶ್ವದ ಎಲ್ಲ ಸಾಧನಗಳಲ್ಲಿ ಭಾರತ ನಿರ್ಮಿತ ಚಿಪ್ ಇರಬೇಕೆನ್ನುವುದು ನಮ್ಮ ಕನಸು: ಮೋದಿ