– ಅತಿಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಯಾರದ್ದು?
ನವದೆಹಲಿ: ಫೆಬ್ರವರಿ 1 ರಂದು ಸತತ 9ನೇ ಬಜೆಟ್ (Union Budget 2026) ಮಂಡಿಸಲು ಸಜ್ಜಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತೊಂದು ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು 2019ರ ಜುಲೈ ನಲ್ಲಿ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡರು. 2024 ರ ಫೆಬ್ರವರಿಯ ಮಧ್ಯಂತರ ಬಜೆಟ್ ಜೊತೆಗೆ ಸತತ 8 ಬಜೆಟ್ ಮಂಡಿಸಿದ್ದು, ಭಾನುವಾರ (ಫೆ.1) ರಂದು 9ನೇ ಬಜೆಟ್ ಮಂಡಿಸಲಿದ್ದಾರೆ. ಇದನ್ನೂ ಓದಿ: ಸತತ 2ನೇ ದಿನ ದರ ಇಳಿಕೆ – 10 ಗ್ರಾಂ ಚಿನ್ನ 1.5 ಲಕ್ಷಕ್ಕೆ ಕುಸಿತ; ಬೆಂಗಳೂರಲ್ಲಿ ಎಷ್ಟಿದೆ?
ಜಾಗತಿಕ ಅಸ್ಥಿರತೆ, ರಾಜಕೀಯ ಪರಿಸ್ಥಿತಿಯ ನಡುವೆ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ಗುರಿಯೊಂದಿಗೆ ಸುಧಾರಣಾ ಕ್ರಮಗಳನ್ನ ಒಳಗೊಂಡಿರುವ ಬಜೆಟ್ ಮಂಡಿಸುವ ನಿರೀಕ್ಷೆಯಿದೆ. ಇದರೊಂದಿಗೆ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ದಿಗ್ಗಜರ ಸಾಲಿಗೆ ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ: 40,000 ಕೋಟಿ ವಂಚನೆ; RCOM ಮಾಜಿ ಅಧ್ಯಕ್ಷನ ಬಂಧಿಸಿದ ಇ.ಡಿ
ಅತಿಹೆಚ್ಚು ಬಜೆಟ್ ಮಂಡಿಸಿದವರು ಯಾರು?
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ (Morarji Desai) ಅವರು ಅತಿ ಹೆಚ್ಚು ಕೇಂದ್ರ ಬಜೆಟ್‌ಗಳನ್ನ ಮಂಡಿಸಿದ ದಾಖಲೆ ಹೊಂದಿದ್ದಾರೆ. ದೇಸಾಯಿ ಅವರು ವಿವಿಧ ಕಾಲಮಾನಗಳಲ್ಲಿ 10 ಬಾರಿ ಬಜೆಟ್ ಮಂಡಿಸಿದ್ದಾರೆ. 1959 ರ ಫೆ.28 ರಂದು ದೇಸಾಯಿ ಅವರು ತಮ್ಮ ಮೊದಲ ಬಜೆಟ್ ಮಂಡಿಸಿದರು. ಮುಂದಿನ 2 ವರ್ಷಗಳಲ್ಲಿ 1960 ಮತ್ತು 1961 ರಲ್ಲಿ ಪೂರ್ಣ ಬಜೆಟ್ ಮಂಡಿಸಿದರು. ಇದಾದ ನಂತರ 1962 ರಲ್ಲಿ ಮಧ್ಯಂತರ ಬಜೆಟ್, ನಂತರದಲ್ಲಿ 2 ಪೂರ್ಣ ಬಜೆಟ್ ಮಂಡಿಸಿದ್ರು. 4 ವರ್ಷಗಳ ನಂತರ, 1967 ರಲ್ಲಿ ಮತ್ತೊಂದು ಮಧ್ಯಂತರ ಬಜೆಟ್ ಮಂಡಿಸಿದರು. ನಂತರ 1967, 1968 ಮತ್ತು 1969 ರಲ್ಲಿ 3 ಪೂರ್ಣ ಬಜೆಟ್ ಮಂಡಿಸಿದರು.
2ನೇ ಸ್ಥಾನದಲ್ಲಿ ಯಾರಿದ್ದಾರೆ?
9 ಬಾರಿ ಬಜೆಟ್ ಮಂಡಿಸಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ (P Chidambaram) 2ನೇ ಸ್ಥಾನದಲ್ಲಿದ್ದಾರೆ. ಚಿದಂಬರಂ 1996 ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಿದರು. 1997 ರಲ್ಲಿ ಮತ್ತೊಂದು ಬಜೆಟ್ ಮಂಡಿಸಿದರು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ 2004 ಮತ್ತು 2008 ರ ನಡುವೆ ಸತತ 5 ಬಜೆಟ್ ಮಂಡಿಸಿದರು. 2013 ಮತ್ತು 2014 ರಲ್ಲಿ ಇನ್ನೂ ಎರಡು ಬಜೆಟ್ ಮಂಡಿಸಿದರು. ಇದೀಗ ಸತತ 9ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿರುವ ನಿರ್ಮಲಾ ಸೀತಾರಾಮನ್ ಅವರು ಚಿದಂಬರಂ ಅವರ ಸಾಲಿಗೆ ಸೇರಿಕೊಳ್ಳಲಿದ್ದಾರೆ.
ನಂತರದಲ್ಲಿ ಯಾರಿದ್ದಾರೆ?
ನಿರ್ಮಲಾ ಸೀತಾರಾಮನ್ ಅವರು ಸದ್ಯ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಇಬ್ಬರೂ ಈವರೆಗೆ 8 ಬಜೆಟ್ ಮಂಡಿಸಿದ್ದಾರೆ. ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದಾಗ 1982 ರಲ್ಲಿ ಮೊದಲ ಮತ್ತು 2012 ರಲ್ಲಿ ಕೊನೆಯ ಬಜೆಟ್ ಮಂಡಿಸಿದರು.
ಸತತ 8 ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಖ್ಯಾತಿ
ಇದೆಲ್ಲದರ ಹೊರತಾಗಿ ಸತತವಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲೇ ಇರೋದು ವಿಶೇಷ. 2025ರ ಫೆಬ್ರವರಿ 1 ರ ಮಧ್ಯಂತರ ಬಜೆಟ್ ಸೇರಿ 8 ಕೇಂದ್ರ ಬಜೆಟ್ ಮಂಡಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2024ರ ಜುಲೈ 23 ರಂದು ಸತತ ಬಜೆಟ್ ಮಂಡಿಸಿದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿದಿದ್ದರು.
ಮನಮೋಹನ್ ಸಿಂಗ್ ಮಂಡಿಸಿದ ಬಜೆಟ್ಗಳೆಷ್ಟು?
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1991 ಮತ್ತು 1996 ರ ನಡುವೆ ಪಿ.ವಿ ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ 5 ನೇರ ಬಜೆಟ್‌ಗಳನ್ನು ಮಂಡಿಸಿದ ಹಿರಿಮೆ ಹೊಂದಿದ್ದಾರೆ. ಇದನ್ನೂ ಓದಿ: NCP ಬಣಗಳ ವಿಲೀನ ನಿರ್ಧಾರವನ್ನ ಅಜಿತ್ ಪವಾರ್ ಫೆ.12ಕ್ಕೆ ಪ್ರಕಟಿಸಬೇಕಿತ್ತು: ಶರದ್ ಪವಾರ್
1 ಬಾರಿ ಬಜೆಟ್ ಮಂಡಿಸಿದವರು ಯಾರು?
ಪಿಯೂಷ್ ಗೋಯಲ್, ಮಧು ದಂಡವತೆ, ಶಂಕರ್‌ರಾವ್ ಚೌವಾಣ್, ಎನ್.ಡಿ ತಿವಾರಿ, ರಾಜೀವ್ ಗಾಂಧಿ, ಚರಣ್ ಸಿಂಗ್, ಸವಿಂದ್ರ ಚೌಧರಿ, ಇಂದಿರಾ ಗಾಂಧಿ, ಜವಹರಲಾಲ್ ನೆಹರು ಒಂದು ಬಾರಿ ಬಜೆಟ್ ಮಂಡಿಸಿದವರಾಗಿದ್ದಾರೆ.





