ದಾವಣಗೆರೆ: ಸ್ನೇಹಿತೆಯೊಂದಿಗಿದ್ದ ಯುವಕನನ್ನು ಬೆದರಿಸಿ ಸುಲಿಗೆ ಮಾಡಿದ ಇಬ್ಬರು ಕಿರಾತಕರನ್ನು ನ್ಯಾಮತಿ (Nyamathi) ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗ (Sivamogga) ತಾಲೂಕಿನ ಚಿಕೋನಹಳ್ಳಿಯ ಅಣ್ಣಪ್ಪನಾಯ್ಕ (27) ಹಾಗೂ ಚೇತನ್ (26) ಎಂದು ಗುರುತಿಸಲಾಗಿದೆ. ಇಬ್ಬರು ಸೇರಿ ಕಲ್ಪಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ಬೆಟ್ಟದ ವಿಂಡ್ ಫ್ಯಾನ್ ಬಳಿ ಬಂದಿದ್ದ ಶಿವಮೊಗ್ಗ ಮೂಲದ ಯುವಕ – ಯುವತಿಯ ವಿಡಿಯೋ ಮಾಡಿದ್ದರು. ಬಳಿಕ ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಪತಿಯ ಹತ್ಯೆ – ಶವದ ಪಕ್ಕದಲ್ಲೇ ಪೋರ್ನ್ ವೀಡಿಯೋ ವೀಕ್ಷಿಸುತ್ತಾ ರಾತ್ರಿ ಕಳೆದ ಪತ್ನಿ
ಹಣ ಕಳೆದುಕೊಂಡ ಯುವಕ ತಕ್ಷಣ ನ್ಯಾಮತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದ. ದೂರು ದಾಖಲಿಸಿಕೊಂಡು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್, ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬಿಎನ್‌ಎಸ್ ಸೆಕ್ಷನ್ 309 (4) ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡ | ಯುವತಿಯ ಕೊಲೆ ಕೇಸ್ – ಮದುವೆ ಆಗಬೇಕಿದ್ದ ಯುವಕನೇ ವಿಲನ್

