DistrictsKarnatakaKodaguLatestMain Post

ಮಡಿಕೇರಿಯಲ್ಲಿ ನೈತಿಕ ಪೊಲೀಸ್ ಗಿರಿ-ಅನ್ಯಕೋಮಿನ ಯುವಕನೊಂದಿಗೆ ಬಂದಿದ್ದಕ್ಕೆ ಥಳಿತ

-ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಮಡಿಕೇರಿ: ಹಿಂದೂ ಯುವತಿ ಜೊತೆಗೆ ಅನ್ಯಕೋಮಿನ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಅಂತಾ ಆರೋಪಿಸಿ ಸ್ಥಳೀಯರು ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೋರಂಗಾಲ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಘಟನೆ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾಗಮಂಡಲ ಬಳಿಯ ಕಾವೇರಿ ನದಿ ತೀರದಲ್ಲಿ ಇಬ್ಬರು ಯುವಕರು, ಇಬ್ಬರು ವಿದ್ಯಾರ್ಥಿನಿಯರು ಅಸಭ್ಯವಾಗಿ ವರ್ತಿಸುತ್ತಿದ್ರು ಅಂತಾ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕರು ಎಮ್ಮೆಮಾಡು ಗ್ರಾಮದವರಾಗಿದ್ದು, ವಿಧ್ಯಾರ್ಥಿನಿಯರು ಭಾಗಮಂಡಲ ಗ್ರಾಮದವರು ಅಂತ ಹೇಳಲಾಗ್ತಿದೆ.

ಅನ್ಯಕೋಮಿಗೆ ಸೇರಿದ ಇಬ್ಬರು ಯುವಕರಲ್ಲಿ ಒಬ್ಬ ಅದೇ ಕೋಮಿಗೆ ಸೇರಿದ ಯುವತಿಯನ್ನ ಪ್ರೀತಿಸುತ್ತಿದ್ದ ಅಂತಾ ಹೇಳಲಾಗಿದ್ದು, ಆಕೆಯನ್ನ ನೋಡಲು ಸ್ನೇಹಿತನ ಜೊತೆ ಬಂದಿದ್ದ ವೇಳೆ ಅಸಭ್ಯ ವರ್ತನೆ ಮಾಡಿದ್ದಾರೆ ಅಂತಾ ಆರೋಪಿಸಿ ಹಲ್ಲೆ ಮಾಡಲಾಗಿದೆ. ಇಬ್ಬರು ಯುವಕರನ್ನು ಅರೆನಗ್ನಗೊಳಿಸಿ ಹಲ್ಲೆ ಮಾಡಲಾಗಿದೆ. ನಂತರ ಎಲ್ಲರನ್ನು ಭಾಗಮಂಡಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪರಸ್ಪರ ರಾಜಿ ಸಂಧಾನ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಅಂತಾ ತಿಳಿದುಬಂದಿದೆ.

Leave a Reply

Your email address will not be published.

Back to top button