ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು ಮಾಡಿದೆ. ಬುಲ್ಡೋಜರ್ ಮೂಲಕ ಮನೆಯನ್ನು ಕೆಡವಲಾಗುತ್ತದೆ ಎಂಬ ಭಯಕ್ಕೆ ಬಿದ್ದು ಎಲ್ಲ ಕಾರು ಕಳ್ಳರ ಕಿಂಗ್‍ಪಿನ್ ಎಲ್ಲ ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ.
ಈತನ ಮಾಹಿತಿ ಮೇರೆಗೆ ಎರಡೂವರೆ ಕೋಟಿ ಮೌಲ್ಯದ 10 ಕಾರುಗಳು ಹಾಗೂ 40 ವಾಹನಗಳ ಬಿಡಿ ಭಾಗಗಳು ಪತ್ತೆಯಾಗಿದೆ. ಗ್ಯಾಂಗ್‍ನ 12 ಸದಸ್ಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಗ್ಯಾಂಗ್ ಸದಸ್ಯರ ವಿರುದ್ಧ ದೆಹಲಿ, ಅಮ್ರೋಹಾ, ರಾಂಪುರ, ಬದೌನ್, ಸಂಭಾಲ್, ಮೊರಾದಾಬಾದ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಯುಪಿ, ಮಧ್ಯಪ್ರದೇಶ ಆಯ್ತು ಈಗ ಗುಜರಾತ್‌ನಲ್ಲೂ ಬುಲ್ಡೋಜರ್ ಸದ್ದು
Advertisement
Advertisement
ಪಾಕ್ಬ್ರಾದ ಗಿಂಡೌಡಾ ಗ್ರಾಮದ ನಿವಾಸಿ ನಾಸಿರುದ್ದೀನ್ ಅಲಿಯಾಸ್ ನಾಸಿರ್ ಈ ಗ್ಯಾಂಗ್‍ನ ಕಿಂಗ್‍ಪಿನ್. ಗ್ಯಾಂಗ್ ಸದಸ್ಯರು ಎರಡು ವರ್ಷಗಳಿಂದ ಕದ್ದ ವಾಹನಗಳನ್ನು ಗ್ರಾಮದ ಹೊರಗಿನ ಅರಣ್ಯದಲ್ಲಿ ನಿರ್ಮಿಸಿದ ಗೋದಾಮಿಗೆ ತರುತ್ತಿದ್ದರು. ಬಳಿಕ ಕಾರಿನ ಸಾಮಾಗ್ರಿಗಳನ್ನು ತೆಗೆದು ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಅಕ್ರಮ ಪೆಟ್ರೋಲ್ ಬಂಕ್ ಧ್ವಂಸ
Advertisement
ಖಚಿತ ಮಾಹಿತಿ ಮೇರೆಗೆ ಗಿಂಡೌಡ ಗ್ರಾಮದ ಕಿಂಗ್‍ಪಿನ್ ನಾಸೀರ್‍ನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ಸಮಯದಲ್ಲಿ ಆತ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕೊನೆಗೆ ಎಸ್‍ಎಚ್‍ಒ ರಂಜನ್ ಶರ್ಮಾ ಅವರು ಬುಲ್ಡೋಜರ್ ಮೂಲಕ ಮನೆಯನ್ನು ಒಡೆಸಲು ಸಿದ್ಧತೆ ಮಾಡಿ ಎಂದು ಸಿಬ್ಬಂದಿಗೆ ಸೂಚಿಸಿದಾಗ ಭಯಕ್ಕೆ ಬಿದ್ದ ಆರೋಪಿ ಉಳಿದ ಎಲ್ಲ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಜೊತೆಗೆ ಕದ್ದ ಕದ್ದ ಸರಕುಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆತನ ಮಾಹಿತಿಯ ಮೇರೆಗೆ ಗೋದಾಮಿನಿಂದ ಕದ್ದ 10 ಕಾರುಗಳು ಮತ್ತು 40 ವಾಹನಗಳ ಕತ್ತರಿಸಿದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲು ಮೂರು ಜನರೊಂದಿಗೆ ಕೃತ್ಯ ಆರಂಭಿಸಿದರು. ಕಳ್ಳತನದಿಂದ ಲಾಭ ಬರುತ್ತಿದ್ದಂತೆ ಗ್ಯಾಂಗ್ ಸದಸ್ಯರ ಸಂಖ್ಯೆ ಹೆಚ್ಚಳವಾಯಿತು.
ನಾಸಿರುದ್ದೀನ್ ವಿಚಾರಣೆಯ ಆಧಾರದ ಮೇಲೆ ಪೊಲೀಸರು ಶಾಹಿದ್ ಅಮ್ರೋಹಾ, ರಿಜುಲ್ ಅಮ್ರೋಹಾ, ಇಮ್ರಾನ್ ಅಮ್ರೋಹಾ, ಫುರ್ಕನ್ ಮೊರಾದಾಬಾದ್, ಅರ್ಮಾನ್ ಅಮ್ರೋಹಾರನ್ನು ಬಂಧಿಸಿದ್ದಾರೆ. ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ನಗರ ಎಸ್ಪಿ ಅಖಿಲೇಶ್ ಬದೌರಿಯಾ ತಿಳಿಸಿದ್ದಾರೆ. ನಾಸಿರ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಫುರ್ಕನ್ ಆಟೋ ಓಡಿಸುತ್ತಿದ್ದನು ಎಂದು ತಿಳಿದು ಬಂದಿದೆ.