ಲಕ್ನೋ: ಮೊರಾದಾಬಾದ್‍ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರಿಗೆ ಸಹಾಯ ಮಾಡಲು ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ.
Advertisement
ಕಳೆದ 50 ವರ್ಷಗಳಿಂದ ಅರವಿಂದ್ ಗೋಯಲ್ ಅವರು ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳ ಹಿಂದೆಯೇ ಆಸ್ತಿಯನ್ನು ದಾನ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ಪ್ರತಿಭಟನೆ – ಜನರನ್ನು ಚದುರಿಸಲು ಯುದ್ಧ ಟ್ಯಾಂಕರ್ ನಿಲ್ಲಿಸಿದ ಚೀನಾ
Advertisement
Advertisement
ಲಾಕ್‍ಡೌನ್ ವೇಳೆ ಮೊರಾದಾಬಾದ್‍ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅರವಿಂದ್ ಕುಮಾರ್ ಗೋಯಲ್ ಅವರು, ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಯನ್ನು ಸಹ ಆಯೋಜಿಸಿದ್ದರು. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್
Advertisement
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ದೇವಿ ಪಾಟೀಲ್, ಡಾ. ಎಪಿಜೆ ಅಬ್ದುಲ್ ಕಲಾಂ ಅವರು, ಡಾ. ಅರವಿಂದ್ ಗೋಯಲ್ ಅವರಿಗೆ ನಾಲ್ಕು ಬಾರಿ ಗೌರವ ಪ್ರಶಸ್ತಿಯನ್ನು ನೀಡಿದ್ದಾರೆ. ಅರವಿಂದ್ ಗೋಯಲ್ ಅವರಿಗೆ ರೇಣು ಗೋಯಲ್ ಎಂಬ ಪತ್ನಿ ಇದ್ದು, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.