ಚಂದ್ರನ ಮಣ್ಣಿನಿಂದ ಆಮ್ಲಜನಕ, ಇಂಧನ ಉತ್ಪಾದಿಸಬಹುದು: ಚೀನಾ

Public TV
1 Min Read
china moon

ಬೀಜಿಂಗ್: ಚಂದ್ರನ ಮೇಲೆ ಮನುಷ್ಯರಿಗೆ ವಾಸಯೋಗ್ಯ ಪರಿಸ್ಥಿತಿಯನ್ನು ಸೃಷ್ಟಿಸಲು ತೀವ್ರ ಶೋಧನೆ ನಡೆಯುತ್ತಿದೆ. ಬಾಹ್ಯಾಕಾಶದಲ್ಲಿ ಮಾನವನಿಗೆ ಜೀವಿಸಲು ಅಗತ್ಯವಾದ ನೀರು, ಗಾಳಿ, ಶಕ್ತಿಯ ಮೂಲಗಳನ್ನು ಹುಡುಕುವ, ಉತ್ಪಾದಿಸುವ, ಸೃಷ್ಟಿಸುವ ಬಗ್ಗೆ ಹಲವು ದೇಶಗಳು ತಾಮುಂದು-ನಾಮುಂದು ಎನ್ನುತ್ತಲೇ ಇವೆ. ಇದೀಗ ಚೀನಾ ಚಂದ್ರನ ಮಣ್ಣಿನಲ್ಲಿ ಆಮ್ಲಜನಕ ಹಾಗೂ ಇಂಧನ ಉತ್ಪಾದನೆ ಸಾಧ್ಯವಿದೆ ಎಂದಿದೆ.

ಕಳೆದ ವರ್ಷ ಚೀನಾ ತನ್ನ ಮಾನವ ರಹಿತ ಮಿಷನ್‌ನಲ್ಲಿ ಚಂದ್ರನಿಂದ ಭೂಮಿಗೆ ತರಲಾದ ಮಣ್ಣಿನ ಮಾದರಿಗಳ ತನಿಖೆಯಲ್ಲಿ ಹೊಸ ಫಲಿತಾಂಶ ಹೊರ ಬಿದ್ದಿದೆ. ಇಂಗಾಲದ ಡೈಆಕ್ಸೈಡ್ ಬಳಸಿ, ಚಂದ್ರನ ಮಣ್ಣಿನಲ್ಲಿ ಆಮ್ಲಜನಕ ಹಾಗೂ ಇಂಧನವನ್ನು ಉತ್ಪಾದಿಸುವ ಅಂಶಗಳಿವೆ ಎಂದು ಚೀನಾದ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

artificial moon

ಚೀನಾ ವಿಜ್ಞಾನಿಗಳ ಈ ವರದಿಯನ್ನು ಜೂಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಇದೀಗ ಸಂಶೋಧಕರು ಚಂದ್ರ ಮಾನವ ಅನ್ವೇಷಣೆಗೆ ಉಪಯುಕ್ತವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಚಂದ್ರನಿಂದ ಭೂಮಿಗೆ ತರಲಾದ ಮಣ್ಣಿನಲ್ಲಿ ಕಬ್ಬಿಣ ಹಾಗೂ ಟೈಟಾನಿಯಂ ಸಮೃದ್ಧವಾಗಿದೆ ಎಂದು ಕಂಡುಹಿಡಿಯಲಾಗಿದೆ. ಇವು ಸೂರ್ಯನ ಬೆಳಕು ಹಾಗೂ ಇಂಗಾಲದ ಡೈಆಕ್ಸೈಡ್‌ನಿಂದ ಆಮ್ಲಜನಕ ಬಿಡುಗಡೆ ಮಾಡುವ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

ಈ ತಂತ್ರದಲ್ಲಿ ಸೂರ್ಯನ ಬೆಳಕನ್ನು ಹೊರತುಪಡಿಸಿ ಬೇರೆ ಯಾವುದೇ ಬಾಹ್ಯ ಶಕ್ತಿಯನ್ನು ಬಳಸಲಾಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ನೀರು, ಆಮ್ಲಜನಕ ಹಾಗೂ ಇಂಧನದಂತಹ ವಿವಿಧ ಉತ್ಪನ್ನಗಳನ್ನು ನೀಡುತ್ತದೆ. ಚಂದ್ರನ ಮೇಲೆ ಮಾನವನ ವಾಸಕ್ಕೆ ಇದೊಂದು ಉಪಯುಕ್ತ ಸಂಶೋಧನೆ ಎಂದು ಚೀನಾ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *