ಲಾಸ್ ಏಂಜಲೀಸ್: ಸಿನಿಮಾ ರಂಗದ ಬಹುದೊಡ್ಡ ಪ್ರಶಸ್ತಿ ಅಂದ್ರೆ ಆಸ್ಕರ್ ಅವಾರ್ಡ್. ಈ ಅವಾರ್ಡ್‍ನ 89ನೇ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಮುಸ್ಲಿಂ ನಟರೊಬ್ಬರಿಗೆ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.
Advertisement
ಮಹೇರ್ಶಲಾ ಆಲಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂನ್ ಲೈಟ್ ಚಿತ್ರದಲ್ಲಿನ ನಟನೆಗಾಗಿ ಆಲಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಎಂಬ ಹೆಗ್ಗಳಿಕೆಗೆ ಅಲಿ ಪಾತ್ರರಾಗಿದ್ದಾರೆ.
Advertisement
Advertisement
ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ `ಮೂನ್ ಲೈಟ್’ ಅತ್ಯತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಅಂತೆಯೇ `ಮ್ಯಾಂಚೆಸ್ಟರ್ ಬೈ ದಿ ಸೀ’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಲಾಲಾ ಲ್ಯಾಂಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಎಮಾ ಸ್ಟೋನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಾಲಾ ಲ್ಯಾಂಡ್ ಚಿತ್ರಕ್ಕಾಗಿ ಯುವ ನಿರ್ದೇಶಕ ಡ್ಯಾಮಿಯೆನ್ ಚಾಝೆಲ್ಲೆ ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.
Advertisement
ಇನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಲಿಯಾಸ್ ಪಿಗ್ಗಿ ಚಾಪ್ಸ್ ಕೂಡ ತನ್ನ ವಿಭಿನ್ನ ಗೆಟಪ್‍ನಿಂದ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ವೇದಿಕೆಗೆ ನಮಸ್ತೆ ಎಂದು ಹೇಳಿದ ಪ್ರಿಯಾಂಕಾ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಫೋಟೋಗಳನ್ನ ಪ್ರಿಯಾಂಕಾ ಚೋಪ್ರಾ ತನ್ನ ಇನ್‍ಸ್ಟ್ರಾಗ್ರಾಮ್ ಅಕೌಂಟ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.