ಸಿಡ್ನಿ: 150 ಕೆಜಿ ತೂಕದ ದೈತ್ಯ ಮೀನು ಮಂಗಳವಾರ ಮಧ್ಯಾಹ್ನ ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡ್ ನ ಕಡಲತೀರದಲ್ಲಿ ಪತ್ತೆಯಾಗಿದೆ.
ಮಂಗಳವಾರ ಮಧ್ಯಾಹ್ನ ಮೂರ್ ಪಾರ್ಕ್ ಬೀಚ್ ನಲ್ಲಿ ಜಾನ್ ಮತ್ತು ರಿಲೆ ಲಿಂಡ್ಹೋಮ್ ಅವರು ವಾಕಿಂಗ್ ಮಾಡುವಾಗ ಈ ದೈತ್ಯ ಮೀನನ್ನ ಕಂಡಿದ್ದಾರೆ. ಲಿಂಡ್ಹೋಮ್ ಅವರು ಮೀನುಗಾರಿಕೆಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದು ಇಂತಹ ಮೀನನ್ನು ನಾನು ಈವರೆಗೆ ಕಂಡಿರಲಿಲ್ಲ. ಆ ಮೀನು ಯಾವುದು ಎಂಬುದರ ಬಗ್ಗೆ ನನಗೆ ಯಾವುದೇ ಕಲ್ಪನೆಯಿಲ್ಲ ಎಂದು ಖಾಸಗಿ ವಾಹಿನಿಯೊಂದರಲ್ಲಿ ಹೇಳಿದ್ದಾರೆ.
Advertisement
Advertisement
“ನಾನು ಬಹಳಷ್ಟು ಮೀನುಗಳನ್ನು ನೋಡಿದ್ದೇನೆ ಮತ್ತು ಬಹಳಷ್ಟು ದೊಡ್ಡ ಮೀನುಗಳನ್ನು ಕಂಡಿದ್ದೇನೆ. ಆದರೆ ನಾನು ಈ ರೀತಿಯ ಮೀನನ್ನ ಎಂದಿಗೂ ಕಾಣಲಿಲ್ಲ” ಎಂದು ಅವರು ಹೇಳಿದ್ದು, ಆ ಮೀನು ಅಂದಾಜು 1.5 ರಿಂದ 1.7 ಮೀಟರ್ ಉದ್ದ ಅಥವಾ ಸುಮಾರು 5 ಅಡಿ ಉದ್ದವಿದೆ ಎಂದು ಅಂದಾಜಿಸಿದ್ದಾರೆ.
Advertisement
ರಿಲೆ ಲಿಂಡ್ಹೋಮ್ ಅವರು ಮೀನನ್ನು ಗುರುತಿಸಲು ಸಾರ್ವಜನಿಕ ಫೋರಂನಲ್ಲಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Advertisement
ಇದು ಕಾಡ್ ಜಾತಿಯ ಮೀನಾಗಿರಬಹುದು ಅಥವಾ ಗ್ರೌಪರ್ ಮೀನಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಆದ್ರೆ ಒಬ್ಬ ವ್ಯಕ್ತಿ ಇದನ್ನು ಟ್ರಿಪ್ಲೆಟೈಲ್ ಎಂದು ಕರೆದಿದ್ದು, ಆತ ಹೇಳುತ್ತಿರುವುದು ಸರಿ ಇರಬಹುದು ಎನ್ನಿಸುತ್ತದೆ ಎಂದು ಮಿ.ಲಿಂಡ್ಹೋಮ್ ಅವರು ಖಾಸಗಿ ವಾಹಿನಿಗೆ ಹೇಳಿದ್ದಾರೆ.
ಈ ದೈತ್ಯ ಮೀನಿನ ಫೋಟೋವನ್ನ ಲಿಂಡ್ಹೋಮ್ ಅವರು ಹಂಚಿಕೊಂಡ ಬಳಿಕ ಶೀಘ್ರದಲ್ಲೇ ಆ ಫೋಟೋ ವೈರಲ್ ಆಗಿದೆ. ಈ ಮೀನು ನಿರ್ದಿಷ್ಟವಾಗಿ ಯಾವ ಜಾತಿಗೆ ಸೇರಿದ್ದು ಎಂದು ಗುರುತಿಸುವುದು ಕಷ್ಟ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೀನು ಪತ್ತೆಯಾದ ಸ್ಥಿತಿಯಿಂದಾಗಿ ಅದನ್ನು ಗುರುತಿಸುವುದು ಕಷ್ಟವೇ. ಆದರೆ ಇದು ಕ್ವೀನ್ಸ್ ಲ್ಯಾಂಡ್ ಗ್ರೌಪರ್ ನಂತೆ ಕಾಣಿಸುತ್ತದೆ ಎಂದು ಕ್ವೀನ್ಸ್ ಲ್ಯಾಂಡ್ ಬೋಟಿಂಗ್ ಮತ್ತು ಫಿಶರೀಸ್ ಪ್ಯಾಟ್ರೋಲ್ ನವರು ಅವರು ಹೇಳಿದ್ದಾರೆ.