ಬೆಂಗಳೂರು: ಕೇರಳದಲ್ಲಿ (Kerala) ಈಗಾಗಲೇ ಮುಂಗಾರು ಮಳೆ (Mansoon Rain) ಪ್ರಾರಂಭಗೊಂಡ ಹಿನ್ನೆಲೆ ನಾಳೆಯಿಂದ (ಭಾನುವಾರ) ಕರ್ನಾಟಕದಲ್ಲೂ (Karnataka) ಮಳೆಯ ಅಲರ್ಟ್ ನೀಡಲಾಗಿದೆ.
ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಈ ಹಿನ್ನೆಲೆ ನಾಳೆಯಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯ ನಿರೀಕ್ಷೆ ಇದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮಿಷನ್ ಭ್ರಷ್ಟಾಚಾರ ಜಾಹೀರಾತು ಕೇಸ್ – ಸಿಎಂ, ಡಿಸಿಎಂಗೆ ಜಾಮೀನು
Advertisement
Advertisement
ನಾಳೆಯಿಂದ ಐದು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯ ಎಚ್ಚರಿಕೆ ನೀಡಿದ್ದು, ಮುಂಗಾರು ಪ್ರವೇಶದಿಂದ ಕ್ರಮೇಣ ಧಗೆಯ ತಾಪಮಾನ ಇಳಿಕೆಯಾಗುವ ಸಂಭವವಿದೆ. ಇದನ್ನೂ ಓದಿ: ಎಸ್‌ಟಿ ನಿಗಮ ಹಗರಣ – ವಾಲ್ಮೀಕಿ ನಿಗಮ ಎಂಡಿ, ಲೆಕ್ಕಾಧಿಕಾರಿ ಬಂಧನ
Advertisement