ಕರಾವಳಿ, ಉತ್ತರ ಒಳನಾಡಿನಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ

Public TV
1 Min Read
RAIN 3

ಬೆಂಗಳೂರು: ಇಂದಿನಿಂದ ಮತ್ತೆ ರಾಜ್ಯದ ಕರಾವಳಿ ಸೇರಿದಂತೆ ಒಳನಾಡಿನಲ್ಲಿ ನೈರುತ್ಯ ಮುಂಗಾರು ಮಳೆ ((Monsoon Rain) ಜೋರಾಗುವ ಸಾಧ್ಯತೆಯಿದೆ.

ಮುಂದಿನ 5 ದಿನಗಳ ಕಾಲ ಗಾಳಿ, ಗುಡುಗು ಮಿಂಚು ಸಹಿತ ಜೋರು ಮಳೆಯಾಗುವ (Heavy Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ (Coastal Karnataka) ಮತ್ತು ಉತ್ತರ ಒಳನಾಡಿಗೆ ಇಂದು ಆರೆಂಜ್ ಅಲರ್ಟ್ (Orange Alert) ಘೋಷಣೆಯಾಗಿದ್ದು, ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸ್ಬೇಡ ಅಂದಿದ್ದಷ್ಟೇ ಹೋಗಿ ಜಲಪಾತಕ್ಕೆ ಜಿಗಿದ ಯುವತಿ!

RAIN 1

ಕರಾವಳಿಯ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಇಂದು, ನಾಳೆ ಮತ್ತು ಮಂಗಳವಾರ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದರೆ, ಭಾನುವಾರ ಮತ್ತು ಸೋಮವಾರ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ.

ಉತ್ತರ ಒಳನಾಡಿಗೆ ಇಂದು ಆರೆಂಜ್, ಮುಂದಿನ 4 ದಿನ ಯೆಲ್ಲೋ ಅಲರ್ಟ್, ದಕ್ಷಿಣ ಒಳನಾಡಿಗೆ ಇಂದಿನಿಂದ ಮುಂದಿನ 5 ದಿನ ಯೆಲ್ಲೋ ಅಲರ್ಟ್ ಜಾರಿಯಾಗಿದೆ. ಬೆಂಗಳೂರಿನಲ್ಲಿ (Bengaluru) ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಕೆಲವೊಮ್ಮೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article