ಬೆಂಗಳೂರು: ಸದನದ ಹೊರಗೆ ವಿಪಕ್ಷ ಕಾಂಗ್ರೆಸ್ ನಡೆಸಿದ ಹೈಡ್ರಾಮಾ ನಡ್ವೆ ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಿದೆ. ಬೊಮ್ಮಾಯಿ ಸಿಎಂ ಆದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಕಾಂಗ್ರೆಸ್ ಹೋರಾಟದ ಕಾರ್ಯತಂತ್ರವನ್ನು ಬದಲಿಸಿದೆ.
Advertisement
ಗದ್ದಲ ಪ್ರತಿಭಟನೆ ಬದಲಿಗೆ, ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ. ಹೀಗಾಗಿ ಮೊದಲ ದಿನದ ಕಲಾಪದಲ್ಲಿ ಯಾವುದೇ ಸದ್ದುಗದ್ದಲ ಕಂಡುಬರಲಿಲ್ಲ.. ಸಂಪ್ರದಾಯದಂತೆ ಆರಂಭದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಸಿಎಂ ಉದಾಸಿ, ಕೆಬಿ ಶಾಣಪ್ಪ, ಜಿ ಮಾದೇಗೌಡ, ಕವಿ ಸಿದ್ದಲಿಂಗಯ್ಯ, ನಟಿ ಜಯಂತಿ ಸೇರಿ ಇಹಲೋಕ ತ್ಯಜಿಸಿದ 31 ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಇದನ್ನೂ ಓದಿ: ಬೆಲೆ ಏರಿಕೆಗೆ ವಿರೋಧ – ಎತ್ತಿನ ಗಾಡಿ ಏರಿದ ಕೈ ನಾಯಕರು
Advertisement
Advertisement
ಮುಖ್ಯಮಂತ್ರಿಗಳು ಅಗಲಿದ ಉದಾಸಿ ಮತ್ತು ಯಡಿಯೂರಪ್ಪ ಸ್ನೇಹವನ್ನು ಸ್ಮರಿಸಿಕೊಂಡ್ರು. ಯಡಿಯೂರಪ್ಪ ಕೂಡ ಸ್ನೇಹ ಸಂಬಂಧ ಸ್ಮರಿಸಿಕೊಂಡು ಭಾವುಕರಾದ್ರು. ಈಶ್ವರಪ್ಪದು ನಂದೂ ಒಂಥರಾ ಲವ್ ಅಂಡ್ ಹೇಟ್ ಗೆಳೆತನ ಎಂದು ಸಿದ್ದರಾಮಯ್ಯ ಬಣ್ಣಿಸಿದ್ರು. ಇನ್ನು, ಯಾವಾಗ್ಲೂ ಸದನದಲ್ಲಿ ಮೊದಲ ಸಾಲಿನಲ್ಲಿ ಇರ್ತಿದ್ದ ಯಡಿಯೂರಪ್ಪ ನಾಲ್ಕನೇ ಸಾಲಿಗೆ ಶಿಫ್ಟ್ ಆಗಿದ್ದಾರೆ. ಇದನ್ನೂ ಓದಿ: ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‍ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ
Advertisement
ಶೆಟ್ಟರ್, ಸುರೇಶ್ ಕುಮಾರ್ ಸಹ ಹಿಂದಿನ ಸಾಲಿನಲ್ಲಿ ಕುಳಿತ್ರು. ಈ ಮಧ್ಯೆ, ಸದನದಲ್ಲಿ ಹೊಸ ಸಚಿವರ ಸಂಭ್ರಮ ಜೋರಾಗಿತ್ತು. ಅತ್ತ ಸಂತಾಪ ಸೂಚನೆ ಪಟ್ಟಿಯಲ್ಲಿ ನಟ ಸಂಚಾರಿ ವಿಜಯ್ ಹೆಸರು ಇಲ್ಲದಕ್ಕೆ ಪರಿಷತ್‍ನಲ್ಲಿ ಆಕ್ಷೇಪ ವ್ಯಕ್ತವಾಯ್ತು. ಸಂಜೆ, ಸರ್ಕಾರದ ಮುಖ್ಯ ಸಚೇತಕರನ್ನಾಗಿ ಸತೀಶ್ ರೆಡ್ಡಿಯನ್ನು ಆಯ್ಕೆ ಮಾಡಲಾಗಿದೆ.