ಬೆಂಗಳೂರು: ಇಂದಿನಿಂದ ಹತ್ತು ದಿನಗಳ ಕಾಲ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ.
ಸರ್ಕಾರದ ಸಾರಥಿ ಬದಲಾವಣೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಕೋವಿಡ್, ನೆರೆ ಹಾವಳಿ, ಬೆಲೆಯೇರಿಕೆ, ಅಭಿವೃದ್ಧಿ ಕುಂಠಿತ ಸೇರಿದಂತೆ ಕೆಲ ಬಹುಚರ್ಚಿತ, ಬಹು ವಿವಾದಿತ ವಿಷಯಗಳು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ, ಗಲಾಟೆ ಸೃಷ್ಟಿಸುವುದು ಖಂಡಿತ ಎಂದೇ ಹೇಳಬಹುದು. ಪ್ರತಿಪಕ್ಷಗಳ ತಂತ್ರಗಳಿಗೆ ಬಿಜೆಪಿ ತಕ್ಕ ಪ್ರತಿತಂತ್ರಗಳನ್ನು ರೆಡಿ ಮಾಡಿಕೊಂಡಿದೆ. ಸಿಎಂ ಬೊಮ್ಮಾಯಿ ಅಧಿವೇಶನ ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ.
Advertisement
Advertisement
ಹಲವು ಸವಾಲುಗಳ ಮಧ್ಯೆ ಬೊಮ್ಮಾಯಿ ಸರ್ಕಾರ ಅಧಿವೇಶನಕ್ಕೆ ಸಿದ್ಧವಾಗಿದ್ದು, ವಿಪಕ್ಷ ಕಾಂಗ್ರೆಸ್ ಸಹ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತನ್ನದೇ ಆದ ಸಿದ್ಧತೆಯನ್ನು ಮಾಡಿಕೊಂಡಿದೆ. ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ಪ್ರತ್ಯಾಸ್ತ್ರಗಳ ರೆಡಿಮಾಡಿಕೊಂಡಿದೆ. ಇದನ್ನೂ ಓದಿ: ನಾನು ಕೂಡು ಒಕ್ಕಲಿಗ ಪಂಗಡದವನು, ಆದರೆ ನಾವು ಲಿಂಗಾಯತರು: ಎಂ.ಬಿ.ಪಾಟೀಲ್
Advertisement
Advertisement
ಅಧಿವೇಶನ ಮೊದಲ ದಿನವೇ ಕಾಂಗ್ರೆಸ್ ಪಕ್ಷ ಫುಲ್ ಆಕ್ಟೀವ್ ಆಗಿದ್ದು, ಬೆಲೆ ಏರಿಕೆ ಖಂಡಿಸಿ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ಎತ್ತಿನಗಾಡಿ ಮೂಲಕವೇ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಡಿ.ಕೆ.ಶಿವಕುಮಾರ್‌ರವರು ಸದಾಶಿವನಗರದಿಂದ ಎತ್ತಿನ ಗಾಡಿ ಮೂಲಕ ಬಂದರೆ, ಸಿದ್ದರಾಮಯ್ಯನವರು ಕುಮಾರಕೃಪಾ ರಸ್ತೆಯಿಂದ ನಗರ ಪ್ರಮುಖ ರಸ್ತೆಗಳಲ್ಲಿ ಎತ್ತಿನಗಾಡಿಯಲ್ಲಿ ವಿಭಿನ್ನವಾಗಿ ಬರುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ. ಇದನ್ನೂ ಓದಿ: ಸೋಮವಾರ ತೆರೆಬೀಳುತ್ತಾ ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಸರ್ಕಸ್?