ಬೆಂಗಳೂರು: ಒಂದು ಕಡೆ ಸಿಕ್ಕಾಪಟ್ಟೆ ಬಿರುಗಾಳಿ ಮಳೆ, ಮತ್ತೊಂದೆಡೆ ಹನಿ ನೀರಿಗೂ ಹಾಹಾಕಾರ. ಇದರ ನಡುವೆಯೇ ಆಘಾತಕಾರಿ ಸುದ್ದಿ ಬಂದಿದೆ.
ಈ ಬಾರಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್‍ನಿನೋ ಕಾರಣದಿಂದ ಜುಲೈ ತಿಂಗಳಲ್ಲಿ ಕಡಿಮೆ ಮಳೆ ಆಗುವ ಸಾಧ್ಯತೆ ಇದ್ದು, ಆಗಸ್ಟ್ ನಲ್ಲಿ ವಾಡಿಕೆಯಂತೆ ಮಳೆ ಆಗಲಿದೆ. ಜೂನ್ 6ರಂದು ಮುಂಗಾರು ಕೇರಳ ಕರಾವಳಿಗೆ ಅಪ್ಪಳಿಸಿದೆ.
Advertisement
Advertisement
ಇತ್ತ ಮಳೆ ಕೊರತೆ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಸರ್ಕಾರ ಈಗ ದೇವರ ಮೊರೆ ಹೋಗಿದೆ. ಜೂನ್ 6ರಂದು ಸರ್ಕಾರದ ಆಧೀನದಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿ ಪೂಜೆಗೆ ಸೂಚಿಸಿದೆ. ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಕಡ್ಡಾಯವಾಗಿ ಪರ್ಜನ್ಯ ಹೋಮ, ವಿಶೇಷ ಪೂಜೆ ಹಾಗೂ ಜಪಕ್ಕೆ ಸೂಚಿಸಿದೆ.
Advertisement
ಇಡೀ ದಿನದ ಪೂಜೆಯ ವೆಚ್ಚ 10 ಸಾವಿರದ 1 ರೂಪಾಯಿ ಮೀರಬಾರದು ಎಂದು ಮುಜರಾಯಿ ಇಲಾಖೆ ಸೂಚಿಸಿದೆ. ಇತ್ತ ಬೆಂಗಳೂರಲ್ಲಿ ಸಂಜೆ ಹೊತ್ತಿಗೆ ಹನಿ ಹನಿ ಮಳೆ ಆಗಿದೆ.