ಬೆಂಗಳೂರು: ಎರಡ್ಮೂರು ದಿನಗಳಿಂದ ಸ್ವಲ್ಪ ತಣ್ಣಗಾಗಿದ್ದ ಮುಂಗಾರು ಮುಂದಿನ ನಾಲ್ಕು ದಿನಗಳಲ್ಲಿ ಮತ್ತೆ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾರಾಂತ್ಯಕ್ಕೆ ಬೆಂಗಳೂರಲ್ಲಿ ಧಾರಾಕಾರ ಮಳೆಯಾಗಲಿದೆ. ಇನ್ನು ಜಿಲ್ಲಾವಾರು ಹೋಲಿಸಿದರೆ ಇಲ್ಲಿಯವರೆಗೆ ಹಾಸನದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಸರಾಸರಿ 321 ಮಿಲಿ ಮೀಟರ್ ಮಳೆಯಾಗುತ್ತಿದ್ದ ಜಿಲ್ಲೆಯಲ್ಲಿ ಜೂನ್‍ನಲ್ಲಿ ಎರಡು ಪಟ್ಟು ಅಂದ್ರೆ 611 ಮಿಲಿ ಮೀಟರ್ ಮಳೆಯಾಗಿದೆ.
Advertisement
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‍ನಲ್ಲಿ ಕಲಬುರಗಿ ಅತೀ ಕಡಿಮೆ ಮಳೆ ಕಂಡ ಜಿಲ್ಲೆ ಎಂದು ಹೇಳಲಾಗಿದೆ.