ಬೆಂಗಳೂರು: ರಾಜ್ಯ (Karnataka) ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆ (Rain) ಕೊರತೆ ಎದುರಿಸಿತ್ತಿದೆ. ಈ ತಿಂಗಳಲ್ಲಿ ಸುಮಾರು 73% ರಷ್ಟು ಮಳೆಯ ಕೊರತೆ ಉಂಟಾಗಿದೆ. ವಾಡಿಕೆಯ ಪ್ರಕಾರ ಆ.29 ರವರೆಗೆ ರಾಜ್ಯದಲ್ಲಿ 211 ಎಂಎಂ ಮಳೆಯಾಗಬೇಕಾಗಿತ್ತು. ಆದರೆ 58 ಎಂಎಂ ಮಾತ್ರ ಮಳೆಯಾಗಿದೆ.
Advertisement
ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರ (KSNDMC) ಮಳೆಯ ದಾಖಲಾತಿ ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಮಳೆಯ ಕೊರತೆಯಿಂದಾಗಿ ಈ ತಿಂಗಳಲ್ಲಿ ತೀವ್ರ ತಾಪಮಾನ ಕೂಡ ಏರಿಕೆಯಾಗಿದೆ ಎಂದು ತಿಳಿಸಿದೆ. ಇದು ರಾಜ್ಯದ ಜನರ ಆತಂಕಕ್ಕೆ ಸಹ ಕಾರಣವಾಗಿದೆ. ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಆಗಮನ – ಬಿಎಸ್‌ವೈ, ಎಂಬಿಪಿ ಪ್ರಯಾಣ
Advertisement
Advertisement
ಬೆಂಗಳೂರಿನಲ್ಲಿ (Bengaluru) ವಾಸ್ತವಿಕವಾಗಿ 116 ಎಂಎಂ ಮಳೆ ಆಗಬೇಕಿತ್ತು. ಆದರೆ ಈಗ 24 ಎಂಎಂ ಮಾತ್ರ ಮಳೆಯಾಗಿದೆ. ಚಿಕ್ಕ ಬಳ್ಳಾಪುರದಲ್ಲಿ 103 ಎಂಎಂ ವಾಸ್ತವಿಕ ಮಳೆ ಬೀಳಬೇಕಿತ್ತು. ಆದರೆ ಈಗ 16 ಎಂಎಂ ಮಾತ್ರ ಮಳೆ ಸುರಿದಿದೆ. ಕಲುಬುರ್ಗಿಯಲ್ಲಿ 148 ಎಂಎಂ ಮಳೆ ನಿರೀಕ್ಷೆ ಇತ್ತು, ಈಗ 29 ಎಂಎಂ ಮಳೆಯಾಗಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗದಲ್ಲಿ ವಾಡಿಕೆಯಂತೆ ಯಾವಾಗಲೂ 535 ಎಂಎಂ ಮಳೆಯಾಗುತ್ತಿತ್ತು. ಆದರೆ ಈ ವರ್ಷ 106 ಎಂಎಂ ಮಾತ್ರ ಮಳೆ ಆಗಿದೆ. ಕೊಡಗಿನಲ್ಲಿ 551 ಎಂಎಂ ವಾಸ್ತವಿಕ ಮಳೆಯ ವಾಡಿಕೆ ಇತ್ತು, ಆದರೆ 102 ಎಂಎಂ ಮಳೆ ಮಾತ್ರ ಬಿದ್ದಿದೆ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ. ಇದನ್ನೂ ಓದಿ: ಮಳೆಗಾಗಿ ಮಕ್ಕಳ ಮದುವೆ ಮಾಡಿಸಿದ ಗ್ರಾಮಸ್ಥರು
Advertisement
Web Stories