ಬೆಂಗಳೂರು: ರಾಜ್ಯಕ್ಕೆ ಮಳೆ (Rain) ಕೊರತೆಯುಂಟಾಗಿದ್ದು, ಬರಗಾಲದ ಮುನ್ಸೂಚನೆ ಸಿಕ್ತಿದೆ. 28 ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು (Farmers) ಕಂಗಾಲಾಗಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಬರೋಬ್ಬರಿ 56% ಮಳೆ ಕೊರತೆಯಾಗಿತ್ತು. ಜುಲೈ ತಿಂಗಳ ಮೊದಲ 11 ದಿನಗಳವರೆಗೆ 34% ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 18%, ಉತ್ತರ ಒಳನಾಡಿನಲ್ಲಿ 55% ಮಳೆ ಕಡಿಮೆಯಾಗಿದೆ. ಉತ್ತರ ಒಳನಾಡಿನ 13 ಜಿಲ್ಲೆಗಳಲ್ಲಿ ಮಳೆಗೆ ಬರ ಬಂದಿದೆ. ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದ್ರೆ 77% ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ 74% ಮಳೆ ಕಡಿಮೆ ಬಿದ್ದಿದೆ. ಇದರಲ್ಲಿ ಮೂರು ಜಿಲ್ಲೆಯಲ್ಲಿ ಮಳೆ ಕೊರತೆ ಕಾಡಿದೆ.
Advertisement
Advertisement
ಇನ್ನೂ ಕೊಡಗು (Kodagu) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದ್ರೆ 80% ಮಳೆ ಕೊರತೆಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ವಾಡಿಕೆಯ ಅರ್ಧದಷ್ಟೂ ಬಿತ್ತನೆ ಮಾಡಿಲ್ಲ. ಈವರೆಗೆ ರಾಜ್ಯದಲ್ಲಿ ಬಿತ್ತನೆ ಆಗಿರೋದು 26% ಮಾತ್ರ. ಇದನ್ನೂ ಓದಿ: ಅಭಿವೃದ್ಧಿ ಕೆಲಸಕ್ಕಿಂತ ಗ್ಯಾರಂಟಿ ಈಡೇರಿಕೆಯೇ ನಮ್ಮ ಮೊದಲ ಆದ್ಯತೆಯಾಗಿತ್ತು: ಪರಮೇಶ್ವರ್
Advertisement
ಈ ನಡುವೆ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆದಿದೆ. ಹವಾಮಾನ ಇಲಾಖೆ ರಾಜ್ಯದ ಬಹುತೇಕ ಕಡೆ ಮುಂದಿನ 4 ದಿನ ಮಳೆ ಮುನ್ಸೂಚನೆ ನೀಡಿದೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಧಿವೇಶನದಲ್ಲಿ ಕೆಲಸಕ್ಕೆ ಬಾರದ ವಿಷಯಗಳೇ ಚರ್ಚೆಯಾಗ್ತಿದೆ – ಬಿಎಸ್ವೈ ಪುತ್ರ ಅಸಮಾಧಾನ
Advertisement
ಕಡಿಮೆ ಬಿತ್ತನೆ ಮಾಡಿರುವ ರಾಜ್ಯದ ಟಾಪ್ 5 ಜಿಲ್ಲೆಗಳು
ಬೆಂಗಳೂರು ಗ್ರಾಮಾಂತರ- 2%
ರಾಮನಗರ – 2%
ಕೋಲಾರ – 4%
ಬಳ್ಳಾರಿ – 5%
ಕೊಡಗು – 7%
ತುಮಕೂರು – 9%
Web Stories