ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಕಾವೇರಿ ಕಣಿವೆಯ ಪ್ರದೇಶಗಳಿಗೆ ಸಿಹಿ ಸುದ್ದಿ. ಒಂದು ವಾರಕ್ಕೆ ಮೊದಲೇ ನೆರೆಯ ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲಿರುವ ಕಾವೇರಿ ಕಣಿವೆ ಪ್ರದೇಶಕ್ಕೆ ಮುಂಗಾರು ಪ್ರವೇಶದಿಂದ ಅನುಕೂಲಕರವಾಗಿದೆ.
ಈಗಾಗಲೇ ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದು, ಡೆಡ್ ಸ್ಟೋರೆಜ್ ತಲುಪಿದೆ. ಲಭ್ಯವಿರುವ ನೀರು ಮುಂದಿನ ತಿಂಗಳು 15ನೇ ತಾರೀಖಿನವರೆಗೆ ಸಾಕಾಗಲಿದೆ. ಆದರೆ ಒಂದು ವಾರಕ್ಕೆ ಮೊದಲೇ ಮುಂಗಾರು ಪ್ರವೇಶದಿಂದ ಜಲಕ್ಷಾಮ ಬಗೆಹರಿಯುವ ನಿರೀಕ್ಷೆ ಇದೆ.
ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಗಳಿವೆ.