ಬೆಂಗಳೂರು: ದೇಶವ್ಯಾಪಿ ಮುಂಗಾರು (Monsoon) ಕುಂಠಿತವಾಗಿದ್ದು, ಕರ್ನಾಟಕ (Karnataka) ಸೇರಿದಂತೆ 17 ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ (Rain) ಕೊರತೆ ಉಂಟಾಗಿದೆ.
ಈ ಬಾರಿ ದಕ್ಷಿಣ ಭಾರತದ ರಾಜ್ಯಗಳೇ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ 45% ರಷ್ಟು ಮುಂಗಾರಿನ ಕೊರತೆಯಾಗಿದೆ. ವಾಯುವ್ಯ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮುಂಗಾರು ಕೈಕೊಟ್ಟಿದೆ. ಆದರೆ ವಾಯುವ್ಯದಲ್ಲಿ ವಾಡಿಕೆಗಿಂತ 42% ರಷ್ಟು ಅಧಿಕ ಮಳೆಯಾಗಿದೆ.
Advertisement
Advertisement
ಮಧ್ಯ ಭಾರತದಲ್ಲಿ 6%, ದಕ್ಷಿಣ ಭಾರತದಲ್ಲಿ 45%, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ 18% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ವಾಡಿಕೆಯಂತೆ 161 ಮಿ.ಮಿ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 88 ಮಿ.ಮಿ ಮಳೆಯಷ್ಟೇ ದಾಖಲಾಗಿದೆ. ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಈ ಬಾರಿ 70% ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ – ಕೇಜ್ರಿವಾಲ್ ನಿವಾಸದ ಬಳಿಯೂ ಪ್ರವಾಹ ಸ್ಥಿತಿ
Advertisement
Advertisement
ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಅಭಾವ:
ಜೂನ್ 1 ರಿಂದ 29 ರವರೆಗೆ ವಾಡಿಕೆಗಿಂತ 57% ರಷ್ಟು ಕಡಿಮೆ ಮಳೆಯಾಗಿದೆ. ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ ಕೊರತೆಯುಂಟಾಗಿದೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಶಿವಮೊಗ್ಗ, ಹಾಸನ, ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರದಲ್ಲಿ 20% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ 22%, ಉತ್ತರ ಕರ್ನಾಟಕದಲ್ಲಿ 21%, ಮಲೆನಾಡಲ್ಲಿ 64%, ಕರಾವಳಿಯಲ್ಲಿ 19% ರಷ್ಟು ಕಡಿಮೆ ಮಳೆಯಾಗಿದೆ. ಇದನ್ನೂ ಓದಿ: ಜೆಜೆಎಂ ಪೈಪ್ಗೆ ಚರಂಡಿ ನೀರು ಸೇರ್ಪಡೆ; ನೀರು ಸೇವಿಸಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥ
Web Stories