ಹಾಸನ: ರಾಜ್ಯದಲ್ಲಿ ಮುಂಗಾರು (Mansoon) ಆಗಮನವಾಗಿದ್ದು, ಕರಾವಳಿ (Karavali) ಜಿಲ್ಲೆಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಅದೇ ರೀತಿ ಹಾಸನ (Hassan) ಜಿಲ್ಲೆಗೂ ಮುಂಗಾರು ಆಗಮಿಸಿದ್ದು, ಭಾರೀ ಮಳೆಯ ಪರಿಣಾಮ ಜಿಲ್ಲೆಯ ಹಲವೆಡೆ ಹಾನಿಯುಂಟಾಗಿದೆ.
ಹಾಸನ ಜಿಲ್ಲೆ, ಸಕಲೇಶಪುರ (Sakleshpura) ತಾಲೂಕಿನ ಹಲವೆಡೆ ಮಳೆಯಿಂದ ಹಾನಿಯುಂಟಾಗಿದ್ದು, ಹಾನಬಾಳು ಗ್ರಾಮದ ಪರಮೇಶ್-ಕಮಲ ಎಂಬ ವೃದ್ಧ ದಂಪತಿಯ ಮನೆಯ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ವಾಸದ ಮನೆ ಸಂಪೂರ್ಣ ಜಖಂಗೊಂಡಿದ್ದು, ವೃದ್ಧ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್
ಭಾರೀ ಮಳೆಯಿಂದಾಗಿ ಹೆತ್ತೂರು ಹೋಬಳಿ, ಬನ್ನಹಳ್ಳಿ ಗ್ರಾಮದ ಸೋಮಶೇಖರ್ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಇನ್ನು ಇದೇ ತಾಲೂಕಿನ ಹುಲ್ಲಹಳ್ಳಿ ಸಮೀಪ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದು, ಹುಲ್ಲಹಳ್ಳಿ ಸುತ್ತಮುತ್ತ ವಿದ್ಯುತ್ ಕಡಿತಗೊಂಡಿತ್ತು. ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡಿದ ಹಿನ್ನೆಲೆ ವಿದ್ಯುತ್ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ಕೈಗೊಂಡು ವಿದ್ಯುತ್ ಪೂರೈಕೆ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ 4 ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆ
ಸದ್ಯ ಬುಧವಾರ ರಾತ್ರಿಯಿಂದ ವರುಣ ಸ್ವಲ್ಪ ಬಿಡುವನ್ನು ನೀಡಿದ್ದು, ಜಿಲ್ಲೆಯ ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ. ಹಾಸನ ಜಿಲ್ಲೆಗೆ ವರುಣನ ಆಗಮನವಾದ್ದರಿಂದ ರೈತರು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಇಬ್ಬರು ಬಲಿ- ತಗ್ಗು ಪ್ರದೇಶಗಳಲ್ಲಿ ಕೃತಕ ಪ್ರವಾಹ ಸೃಷ್ಟಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]