ಧಾರವಾಡ: ಮಠಾಧೀಶರು, ಪಾದ್ರಿಗಳು ಮತ್ತು ಮೌಲ್ವಿಗಳು ರಾಜಕಾರಣ ಮಾಡಬಾರದು ಎಂದು ನಿಜಗುಣಾನಂದ ಸ್ವಾಮೀಜಿ (Nijagunananda Swamiji) ಅಭಿಪ್ರಾಯಪಟ್ಟರು.
ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ನೊಣವಿನಕೆರೆ ಸ್ವಾಮೀಜಿ ಹೇಳಿಕೆ ಕೊಟ್ಟ ವಿಚಾರವಾಗಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಧಾರವಾಡದಲ್ಲಿ ಮಾತನಾಡಿರುವ ಅವರು, ಸ್ವಾಮೀಜಿಗಳು ರಾಜಕೀಯದಿಂದ ಹೊರತಾಗಿರಬೇಕು. ನಮ್ಮದೇನಿದ್ದರೂ ಧರ್ಮ, ಸಂಸ್ಕತಿ, ಸಂಸ್ಕಾರದ ವಿಚಾರಧಾರೆಗಳಿರಬೇಕು. ಈಗ ಎಲ್ಲ ಸಮುದಾಯಗಳು ಸಂಕೀರ್ಣದಿಂದ ಹೊರಗೆ ಬಂದಿವೆ ಎಂದರು. ಇದನ್ನೂ ಓದಿ: ಯತ್ನಾಳ್‍ರಿಂದ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ: ಎಂ.ಬಿ ಪಾಟೀಲ್
Advertisement
Advertisement
ಮಠಾಧೀಶರು ರಾಜಕಾರಣದಲ್ಲಿದ್ದಾರೆ ಎಂಬ ವಿಚಾರ ಒಂದು ಕಡೆ ಆದರೆ, ಮಾಧ್ಯಮಗಳೂ ಸಹ ರಾಜಕಾರಣದ ವರ್ಗದಲ್ಲಿವೆ. ಅವುಗಳು ಕೂಡ ರಾಜಕಾರಣ ಹೊರತುಪಡಿಸಿ ನಿಂತಿಲ್ಲ. ಒಂದೊಂದು ಚಾನೆಲ್‌ಗಳು ಒಬ್ಬೊಬ್ಬ ರಾಜಕಾರಣಿಯನ್ನು ವೈಭವೀಕರಿಸಿದರೆ, ಕೆಲ ಚಾನೆಲ್‌ಗಳು ಮತ್ತು ರಾಜಕಾರಣಿಗಳನ್ನು ನಿರಾಕರಿಸುತ್ತವೆ. ಈಗ ಮಾಧ್ಯಮ ಮತ್ತು ಸ್ವಾಮೀಜಿಗಳ ಇಬ್ಬರ ಪಾತ್ರವೂ ಸೋಲುತ್ತಿದೆ. ಸಮಾಜದಲ್ಲಿ ಎಲ್ಲವೂ ಸಮತೋಲನ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಮಠಾಧೀಶರು ರಾಜಕಾರಣದಲ್ಲಿ ಬರಬಾರದು ಎನ್ನುವುದು ಸತ್ಯ, ಧರ್ಮ, ರಾಜಕಾರಣದಲ್ಲಿ ಪ್ರವೇಶ ಮಾಡಬಾರದು. ಕೇವಲ ಲಿಂಗಾಯತ ಸ್ವಾಮೀಜಿಗಳು ಮಾತ್ರವಲ್ಲ ಮೌಲ್ವಿ, ಪಾದ್ರಿಗಳೂ ಕೂಡ ರಾಜಕಾರಣದಲ್ಲಿ ಪ್ರವೇಶ ಆಗಬಾರದು. ಯಾವ ಧರ್ಮದ ನೇತಾರರೂ ರಾಜಕಾರಣ ಪ್ರವೇಶ ಮಾಡಬಾರದು. ರಾಜಕಾರಣಿಗಳಿಗೆ ಸ್ವಾಮೀಜಿಗಳು ಬುದ್ಧಿ ಹೇಳಬಹುದು, ಮಾರ್ಗದರ್ಶನ ಮಾಡಬಹುದು, ಒಬ್ಬ ಸ್ವಾಮೀಜಿಯನ್ನು ಬಳಸಿಕೊಳ್ಳುವಾಗ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು. ಅವರನ್ನು ಧಾರ್ಮಿಕ ಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ರಾಜಕಾರಣಿಗಳು ಸ್ವಾಮೀಜಿಗಳನ್ನು ಬೇರೆ ಕೆಲಸಕ್ಕೆ ಬಳಸುವಾಗ ಸ್ವಾಮೀಜಿಗಳೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ
Advertisement
ಮಠಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಪೂರ್ವದಲ್ಲಿ ಪ್ರಭು ಪರಂಪರೆ ಇತ್ತು. ಆಗ ಮಹಾರಾಜರು ಎಲ್ಲರನ್ನೂ ಸಲಹುತ್ತಿದ್ದರು. ಮಠಗಳಲ್ಲಿ ಶೈಕ್ಷಣಿಕ ಸಂಸ್ಥೆ, ಉಚಿತ ಪ್ರಸಾದ ನಿಲಯ, ಅನಾಥ ಮಕ್ಕಳು ಇರುತ್ತಾರೆ. ಸಾವಿರಾರೂ ಪುಸ್ತಕ ಪ್ರಕಟಿಸಬೇಕಿರುತ್ತದೆ. ರಾಜಾಶ್ರಯ ಕಳೆದುಕೊಂಡ ಸಂಗೀತಗಾರರಿಗೆ ಮಠಗಳೇ ಆಶ್ರಯ ಆಗಿರುತ್ತವೆ. ಅನೇಕ ಜನರಿಗೆ ಮಠಗಳು ಅವಕಾಶ ಕಲ್ಪಿಸಿಕೊಡಬೇಕಿರುತ್ತದೆ. ಮಠಗಳಿಗೆ ಬರುವ ಅನುದಾನ ಪ್ರಜಾಪ್ರಭುತ್ವದ ತೆರಿಗೆ ಹಣವೇ ಆಗಿರುತ್ತದೆ. ಆದರೂ ಸಹ ಮಠದ ಸೇವೆ ಸಂಪೂರ್ಣ ಪ್ರಜೆಗಳಿಗೆ ಸಲ್ಲುತ್ತದೆ. ಹೀಗಾಗಿ ಸರ್ಕಾರ ಅನುದಾನ ಕೊಡಬೇಕಾಗುತ್ತದೆ ಎಂದು ಹೇಳಿದರು.