ಟ್ರಾನ್ಸ್ ಫಾರ್ಮರ್ ನಲ್ಲಿ ಸಿಲುಕಿದ್ದ ಮರಿಯನ್ನು ರಕ್ಷಿಸಿದ್ವು ಕೋತಿಗಳು!

Public TV
1 Min Read
MONKEY RESQUE 02

ಚಿತ್ರದುರ್ಗ: ವಿದ್ಯುತ್ ಪ್ರವಹಿಸುತ್ತಿದ್ದ ಟ್ರಾನ್ಸ್ ಫಾರ್ಮರ್ ಮೇಲೆ ಅನಿರೀಕ್ಷಿತವಾಗಿ ಜಿಗಿದು ಅಪಾಯಕ್ಕೆ ಸಿಲುಕಿದ್ದ ಕೋತಿ ಮರಿಯೊಂದನ್ನು ಕೋತಿಗಳೇ ರಕ್ಷಿಸಿದ ಮಾನವೀಯತೆ ಮೆರೆದ ಘಟನೆ ಚಿತ್ರದುರ್ಗ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಎಸ್ ಜೆಎಂ ಡೆಂಟಲ್ ಕಾಲೇಜು ಆವರಣದಲ್ಲಿ ಕಟ್ಟಡದ ಮೇಲೆ ಮಂಗಗಳ ಹಿಂಡೊಂದು ಕುಳಿತಿತ್ತು. ಅದರಲ್ಲಿ ಕೆಲವು ಮರಿಗಳೂ ಇದ್ದವು. ಇದ್ದಕಿದ್ದಂತೆ ಒಂದು ಕೋತಿಯ ಮರಿ ಜಿಗಿದು ಕಟ್ಟಡದ ಪಕ್ಕದಲ್ಲಿದ್ದ ವಿದ್ಯುತ್ ಪ್ರವಹಿಸುತ್ತಿರುವ ಟ್ರಾನ್ಸ್ ಫಾರ್ಮರ್ ಮೇಲೆ ಜಿಗಿದು ಗಾಯಗೊಂಡು ಕುಳಿತುಬಿಟ್ಟಿತು. ಇನ್ನೇನು ಕೋತಿ ಮರಿ ವಿದ್ಯುತ್ ಶಾಕ್ ನಿಂದ ಅಸುನೀಗಿತು ಎಂದು ಎಲ್ಲರೂ ತಿಳಿದಿದ್ದರು.

ಈ ದೃಶ್ಯಗಳನ್ನು ಅಲ್ಲಿ ಕುಳಿತಿದ್ದ ಇತರ ಮಂಗಗಳು ನೋಡುತ್ತಿದ್ದವು. ಆದರೆ ಅವುಗಳಲ್ಲಿ ಕೆಲ ಮಂಗಗಳು ಕೋತಿಯ ಮರಿಯನ್ನು ರಕ್ಷಿಸಲು ಮುಂದಾದವು. ಅಕ್ಕ ಪಕ್ಕ ಸಾಕಷ್ಟು ವಿದ್ಯುತ್ ತಂತಿಗಳಿದ್ದವು. ಸ್ವಲ್ಪ ಯಾಮಾರಿದರೂ ಕೋತಿ ಮರಿ ಜೊತೆಗೆ ರಕ್ಷಿಸಲು ಬಂದ ಕೋತಿಗಳು ಪ್ರಾಣಬಿಡುವ ಪ್ರಸಂಗವಿತ್ತು.

MONKEY RESQUE 01

ಆದರೆ ಚಾಣಾಕ್ಷತನದಿಂದ ಆ ಕೋತಿಗಳು ತಮ್ಮ ಪ್ರಾಣದ ಮೇಲಿನ ಹಂಗನ್ನೂ ತೊರೆದು ಆ ಪುಟ್ಟ ಕೋತಿಯನ್ನು ರಕ್ಷಿಸಿದವು. ಮನುಷ್ಯನಿಗೆ ಮಾತ್ರವಲ್ಲ ತಮಗೂ ಮಾನವೀಯತೆ ಇದೆ ಎಂದು ಸಾಬೀತುಪಡಿಸಿದವು. ಅಷ್ಟರಲ್ಲಿ ತಾಯಿಕೋತಿ ತನ್ನ ಮರಿಯನ್ನು ಎತ್ತಿಕೊಂಡು ಅಲ್ಲಿಂದ ಮುನ್ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *