– 8ರಿಂದ 10 ಮಂದಿ ಮೇಲೆ ದಾಳಿ
ಬೀದರ್: ದರೋಡೆಕೋರರಿಗೆ ಹೆದರಿ ಜನರು ಮನೆಯಿಂದ ಹೊರಗೆ ಬಾರದ ಪ್ರಕರಣ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಬೀದರ್‌ನ ಗ್ರಾಮವೊಂದರಲ್ಲಿ ಮಂಗಗಳಿಗೆ ಹೆದರಿ ಗ್ರಾಮಸ್ಥರು ಮನೆಯಲ್ಲಿ ಕೂರುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಜಿಲ್ಲೆಯ ಭಾಲ್ಕಿ ತಾಲೂಕಿನ ಜವಳಗಾ ಗ್ರಾಮಸ್ಥರು ಮಂಗಗಳ ಹಾವಳಿಗೆ ಹೆದರಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸುಮಾರು 2 ತಿಂಗಳಲ್ಲಿ ಗ್ರಾಮದ 8 ರಿಂದ 10 ಮಂದಿ ಮೇಲೆ ಮಂಗಗಳು ಕಚ್ಚಿ, ದಾಳಿ ನಡೆಸಿವೆ. ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಕಾರಣವಿಲ್ಲದೆ ಮಂಗಗಳು ದಾಳಿ ಮಾಡುತ್ತಿವೆ. ಜನರನ್ನು ಕಂಡರೆ ಸಾಕು ಅವರ ಮೇಲೆ ಎಗರಿ, ಕಚ್ಚಿ ಗಾಯಗೊಳಿಸುತ್ತಿವೆ. ಆದ್ದರಿಂದ ಮಂಗಗಳು ಯಾವಾಗ? ಯಾರ ಮೇಲೆ ದಾಳಿ ಮಾಡುತ್ತವೋ ಎನ್ನುವ ಭಯದಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.
Advertisement
Advertisement
ಈ ಗ್ರಾಮದ ಜನರು ವಾನರ ಸೈನ್ಯದ ದಾಳಿಗೆ ಹೆದರಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಂಗಗಳು ಹಿಂಡು ಹಿಂಡಾಗಿ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದು, ಗಾಯಗಳಿಗೆ 15-20 ಹೊಲಿಗೆಗಳು ಹಾಕುವ ರೀತಿ ತೀವ್ರವಾಗಿ ಮಂಗಗಳು ಜನರನ್ನು ಗಾಸಿಗೊಳಿಸುತ್ತಿದೆ. ದರೋಡೆಕೋರು ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡುವ ರೀತಿ ಮಂಗಗಳು ಜನರ ಮೇಲೆ ದಾಳಿ ಮಾಡುತ್ತಿವೆ.
Advertisement
ಸತತ ಎರಡು ತಿಂಗಳಿನಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರ ಮೇಲೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಂಡು ಮಂಗಗಳ ಕಾಟದಿಂದ ಮುಕ್ತಿಗೊಳಿಸಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.