ಕಾರವಾರ: ಬಿಸಿಲ ಬೇಗೆಗೆ ನೀರನ್ನರಸಿ ಬಂದ ಮಂಗಗಳು ಬಾವಿಯಲ್ಲಿ ಬಿದ್ದು ಒದ್ದಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಲಗೇರಿಯಲ್ಲಿ ನಡೆದಿದೆ.
ಗ್ರಾಮದ ಕೃಷಿಕ ವಿ.ಜಿ ಹೆಗಡೆಯವರು ತಮ್ಮ ತೋಟದಲ್ಲಿ ಹೊಸದಾಗಿ ಬಾವಿ ತೋಡಿಸಿದ್ದರು. ಬಿಸಿಲ ಬೇಗೆಯಿಂದ ದಾಹಗೊಂಡಿದ್ದ ಒಂದೆರೆಡು ಮಂಗಗಳು ದಾಹ ತೀರಿಸಿಕೊಳ್ಳಲು ಬಾವಿಗೆ ಇಳಿದು ನೀರು ಕುಡಿದವು. ಆದ್ರೆ ಮೇಲೆ ಬರಲಾಗದೇ ಅರಚಲು ಶುರುಮಾಡಿದಾಗ ಅವುಗಳ ರಕ್ಷಣೆಗೆ ಗುಂಪಿನ ಇತರ ಮಂಗಗಳು ಬಾವಿಗೆ ಹಾರಿದವು, ಆದರೆ ಅವುಗಳಿಗೂ ಮೇಲೆ ಬರಲು ಸಾಧ್ಯವಾಗದೇ ಒದ್ದಾಡ ತೊಡಗಿದವು.
Advertisement
ಕೆಲವು ಗಂಟೆಗಳ ನಂತರ ಗಮನಿಸಿದ ಜಮೀನಿನ ಮಾಲೀಕ ಹೆಗಡೆಯವರು ಬಾವಿಗೆ ಹಗ್ಗ ಹಾಗೂ ಕೋಲನ್ನು ಇಳಿಬಿಟ್ಟು ಅವುಗಳನ್ನು ರಕ್ಷಿಸಿದ್ದಾರೆ.