ಬರ್ನ್: ಮಂಕಿಪಾಕ್ಸ್ ವೈರಸ್ ಹರಡುವಿಕೆ ಬಗ್ಗೆ ಜಾಗತಿಕವಾಗಿ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ(WHO) ಲಸಿಕೆ ಸೇರಿದಂತೆ ಇತರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಂಕಿಪಾಕ್ಸ್ ವೈರಸ್ ಜಾಗತಿಕವಾಗಿ ಹರಡುತ್ತಿದ್ದು, ಇದನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ವರ್ಗೀಕರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧರಿಸಲು ಮುಂದಿನ ವಾರ ತುರ್ತು ಸಭೆ ನಡೆಸಲಾಗುವುದು ಎಂದು ತಿಳಿಸಿದೆ.
Advertisement
Advertisement
ಸದ್ಯ ಜನರು ಸಾಮೂಹಿಕವಾಗಿ ಲಸಿಕೆಗಳನ್ನು ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು WHO ತಿಳಿಸಿದ್ದು, ಮಂಕಿಪಾಕ್ಸ್ ಹೆಸರು ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಉತ್ತರಪ್ರದೇಶ ಮಾದರಿಯಲ್ಲೇ ಕಾಫಿನಾಡಿನಲ್ಲೂ ಬುಲ್ಡೋಜರ್ ಪ್ರಯೋಗ
Advertisement
ಈ ಬಗ್ಗೆ ತಿಳಿಸಿದ WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸಸ್, ಮಂಕಿಪಾಕ್ಸ್ ಹೆಸರನ್ನು ಬದಲಾಯಿಸಲು ಪ್ರಪಂಚದಾದ್ಯಂತ ತಜ್ಞರು ಚರ್ಚೆ ನಡೆಸಿದ್ದಾರೆ. ಈ ಹೆಸರು ಜನ ಸಮುದಾಯದಲ್ಲಿ ತಾರತಮ್ಯ ಹಾಗೂ ಕಳಂಕಿತವಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
Advertisement
ಮಂಕಿಪಾಕ್ಸ್ ಹೆಸರು ಬದಲಾವಣೆ ಬಗ್ಗೆ ನಾವು ಪ್ರಪಂಚದಾದ್ಯಂತ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ WHO ಶೀಘ್ರವೇ ಹೊಸ ಹೆಸರನ್ನು ಘೋಷಿಸಲಿದೆ ಎಂದು ತಿಳಿಸಿದರು.
ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ:
ಮಂಕಿಪಾಕ್ಸ್ ವೈರಸ್‌ಗೆ ಜನರು ಸಾಮೂಹಿಕವಾಗಿ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ ಮಂಕಿಪಾಕ್ಸ್ ಹರಡುವಿಕೆಯ ಅಪಾಯದಲ್ಲಿರುವ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕತರು, ಆರ್ಥೋಪಾಕ್ಸ್ ವೈರಸ್‌ಗಳೊಂದಿಗೆ ಕೆಲಸ ಮಾಡುವ ಪ್ರಯೋಗಾಲಯದ ಸಿಬ್ಬಂದಿ, ಪರೀಕ್ಷೆಯನ್ನು ನಡೆಸುವ ಕ್ಲಿನಿಕಲ್ ಸಿಬ್ಬಂದಿ ಮಾತ್ರವೇ ಲಸಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ
ಆದರೂ ಅಪಾಯವಿರುವ ಗರ್ಭಿಣಿಯರು, ಮಕ್ಕಳು ಹಾಗೂ ಹೆಚ್‌ಐವಿ ಸೋಂಕಿತರು ಲಸಿಕೆಗಳನ್ನು ಪಡೆಯಬಹುದು ಎಂದು WHO ತಿಳಿಸಿದೆ.