ಬರ್ನ್: ಮಂಕಿಪಾಕ್ಸ್ ಪ್ರಸ್ತುತ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ ಆದರೆ, ಇದು ವಿಕಸನಗೊಳ್ಳುತ್ತಿರುವುದು ಭೀತಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ತಿಳಿಸಿದೆ.
WHO ಡೈರೆಕ್ಟರ್ ಜನರಲ್, ಹಲವು ದೇಶಗಳಲ್ಲಿ ಏಕಾಏಕಿ ಹರಡುತ್ತಿರುವ ಮಂಕಿಪಾಕ್ಸ್ ಕುರಿತು ಐಹೆಚ್‌ಆರ್ ತುರ್ತು ಸಮಿತಿ ನೀಡಿದ ಸಲಹೆಯನ್ನು ಒಪ್ಪುತ್ತದೆ ಹಾಗೂ ಪ್ರಸ್ತುತ ಇದು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ
Advertisement
Advertisement
ಆದರೂ WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ಮಂಕಿಪಾಕ್ಸ್ ವೈರಸ್ ಹರಡುವುದನ್ನು ತಡೆಯಲು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬಳಸಿಕೊಳ್ಳಬೇಕು, ಅಪಾಯದಲ್ಲಿರುವ ಪ್ರದೇಶಗಳಲ್ಲಿ ಆರೋಗ್ಯದ ಉಪಕರಣಗಳು ಲಭ್ಯವಿದೆ. ಇದನ್ನು ತುರ್ತಾಗಿ ಹಂಚಿಕೊಳ್ಳುವ ಮೂಲಕ ರೋಗದಿಂದ ಪಾರಾಗುವ ಅಗತ್ಯವಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ
Advertisement
Deeply concerned about the #Monkeypox outbreak, which represents a serious, evolving threat. I convened an Emergency Committee. The experts advised that it currently doesn’t constitute a Public Health Emergency of International Concern. My statement: https://t.co/sZIlUSdoGM pic.twitter.com/puOwg4RFTX
— Tedros Adhanom Ghebreyesus (@DrTedros) June 25, 2022
Advertisement
ಮಂಕಿಪಾಕ್ಸ್ ಇದೀಗ 50ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದ್ದು, ಮೇ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಸುಮಾರು 3,000 ಪ್ರಕರಣಗಳು ವರದಿಯಾಗಿದೆ.