ನವದೆಹಲಿ: ಪ್ರಪಂಚದ ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ವೈರಸ್ ಪ್ರಕರಣಗಳಿಂದ ಎಲ್ಲೆಡೆ ಆತಂಕ ಹೆಚ್ಚುತ್ತಿದೆ. ಇದೀಗ ಭಾರತದಲ್ಲಿ ಮಂಕಿಪಾಕ್ಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಎಲ್ಲಾ ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಣ್ಗಾವಲನ್ನು ಇಟ್ಟಿದೆ.
ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಾದ ವಿಮಾನ ನಿಲ್ದಾಣ, ಬಂದರುಗಳು ಹಾಗೂ ಭೂ ಗಡಿ ಪ್ರದೇಶಗಳಲ್ಲಿ ಕೇಂದ್ರ ವಿದೇಶದಿಂದ ಬರುವವರ ಮಾದರಿಗಳನ್ನು ಪರಿಶೀಲಿಸಲು ಆದೇಶ ನೀಡಿದೆ. ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿ ರೋಗದ ಲಕ್ಷಣ ಕಂಡುಬಂದಲ್ಲಿ, ಅವರ ಮಾದರಿಗಳನ್ನು ಹೆಚ್ಚಿನ ತನಿಖೆಗೆ ಪುಣೆಯ ಅಂತರಾಷ್ಟ್ರೀಯ ವೈರಾಲಜಿ ಸಂಸ್ಥೆ(ಎನ್‌ಐವಿ)ಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ
Advertisement
Advertisement
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಮಂಕಿಪಾಕ್ಸ್ ಕಾಯಿಲೆ ಬಗ್ಗೆ ಚರ್ಚಿಸಲು ತುರ್ತು ಸಭೆಯನ್ನು ಕರೆದಿದೆ. ವೈರಸ್ ಹರಡಲು ಕಾರಣ ಹಾಗೂ ಅದನ್ನು ತಡೆಗಟ್ಟುವ ವಿಧಾನದ ಬಗ್ಗೆ ಡಬ್ಲ್ಯುಹೆಚ್‌ಒ ಚರ್ಚಿಸಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ
Advertisement
ವರದಿಗಳ ಪ್ರಕಾರ ಈ ವೈರಸ್ ಸಲಿಂಗಕಾಮಿಗಳಲ್ಲಿ ಹರಡುವ ಅಪಾಯ ಹೆಚ್ಚಾಗಿದೆ. ಮೇ ತಿಂಗಳ ಆರಂಭದಲ್ಲಿ ಬ್ರಿಟನ್, ಸ್ಪೇನ್, ಬೆಲ್ಜಿಯಂ, ಇಟಲಿ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಪ್ರಕರಣಗಳು ಕಂಡುಬಂದಿವೆ.
Advertisement
ಮೇ 7 ರಂದು ಇಂಗ್ಲೆಂಡ್‌ನಲ್ಲಿ ಮಂಕಿಪಾಕ್ಸ್ ವೈರಸ್‌ನ ಮೊದಲ ಪ್ರಕರಣ ಪತ್ತೆಹಚ್ಚಲಾಗಿತ್ತು.