ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಕೋತಿಗಳ ಕಾಟ ಜೋರಾಗಿದ್ದು, ಕೋತಿಯೊಂದು ಕಚೇರಿಯಲ್ಲಿದ್ದ ಲ್ಯಾಂಡ್‍ಲೈನ್ ಫೋನನ್ನೇ ಹೊತ್ತೊಯ್ದಿದೆ.
ಹೌದು. ಕಚೇರಿಯೊಳಗಿಂದ ಲ್ಯಾಂಡ್ ಲೈನ್ ಕಸಿದುಕೊಂಡು ಬಂದಿರೋ ಕೋತಿ ಜಿಲ್ಲಾಡಳಿತ ಭವನದ ಬೃಹತ್ ಕಟ್ಟಡ ಏರಿ ಆರಾಮಾಗಿ ಕೂತಿದೆ. ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರೋ ಕೋತಿಗಳು ಜಿಲ್ಲಾಡಳಿತ ಭವನವನ್ನೇ ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ.
ಯಾರ ಅಂಜಿಕೆಯಿಲ್ಲದೆ ಕಚೇರಿಗೆ ನುಗ್ಗಿ ಕೈಗೆ ಸಿಗೋ ವಸ್ತುಗಳನ್ನೆಲ್ಲ ಈ ಕೋತಿಗಳು ಹೊತ್ತೊಯ್ಯುತ್ತಿದ್ದು ಸಖತ್ ತೊಂದರೆ ಕೊಡುತ್ತಿವೆ. ಒಟ್ಟಿನಲ್ಲಿ ದಿನೇ ದಿನೇ ಕೋತಿಗಳ ಉಪಟಳ ಮಿತಿ ಮೀರಿದ್ದು ಕೋತಿಗಳ ಕಾಟಕ್ಕೆ ಕಡಿವಾಣ ಹಾಕೋಕಾಗದೆ ಅಧಿಕಾರಿಗಳು ತಲೆ ಕೆಡೆಸಿಕೊಳ್ಳುವಂತಾಗಿದೆ.